Home Posts tagged #puttur (Page 26)

ಬಿಜೆಪಿ ರಾಜ್ಯಾಧ್ಯಕ್ಷರ ಸವಣೂರಿನ ಮನೆಯಲ್ಲಿ ರಹಸ್ಯ ಹವನ

ಬಿಜೆಪಿ ರಾಜ್ಯಾಧ್ಯಕ್ಷರ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಸುಮಾರು 9ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ಹವನ ನಡೆಯಲಿದೆ ನಿರಂತರ 9 ದಿನಗಳ ಕಾಲ ನಡೆಯುವ ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ. ಅತ್ಯಂತ ಗೌಪ್ಯವಾಗಿ ಈ ಹವನವನ್ನು

ಜೂನ್ 17 ಮತ್ತು 18 : ಪುತ್ತೂರು ಜೈನಭವನದಲ್ಲಿ ಹಲಸು ಮತ್ತು ಹಣ್ಣುಗಳ ಮೇಳ-2023

ಪುತ್ತೂರು ನವತೇಜ ಟ್ರಸ್ಟ್, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 6ನೇ “ಹಲಸು ಮತ್ತು ಹಣ್ಣುಗಳ ಮೇಳ-2023” ಜೂ.17 ಹಾಗೂ 18 ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಳದಲ್ಲಿ ಸುಮಾರು 30ಕ್ಕೂ ಅಧಿಕ ಮಿಕ್ಕಿ ಹಲಸಿನ ಉತ್ಪನ್ನಗಳ ಪ್ರದರ್ಶನ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ

ಪುತ್ತೂರು : ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸಾರ್ವಜನಿಕರಿಂದ ಯಾವುದೇ ದೂರುಗಳಿಲ್ಲದ ರೀತಿಯಲ್ಲಿ ಅಸ್ಪತ್ರೆಯನ್ನು ಸಜ್ಜುಗೊಳಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್, ಅಮೆರಿಕಾ ಫ್ಲೋರಿಡಾ ರೋಟರಿ ಕ್ಲಬ್ ನ್ಯೂ

ಪುತ್ತೂರು: ಡಾ. ಬಡೆಕ್ಕಿಲ ಶ್ರೀಧರ ಭಟ್‍ರ ಪುಸ್ತಕ ಲೋಕಾರ್ಪಣೆ ಮತ್ತು ನುಡಿ ನಮನ ಕಾರ್ಯಕ್ರಮ

ಪುತ್ತೂರು ತಾಲ್ಲೂಕು ಶಾಂತಿಗೋಡಿನ ನವಚೇತನ ಹಿರಿಯ ನಾಗರೀಕರ ಸಮುಚ್ಛಯದ ಸಹಯೋಗದಲ್ಲಿ ಬಹುಮುಖ ಪ್ರತಿಭೆಯ ದಿ. ಡಾ. ಬಡೆಕ್ಕಿಲ ಶ್ರೀಧರ ಭಟ್ ಅವರ ಪುಸ್ತಕದ ಲೋಕಾರ್ಪಣೆ ಮತ್ತು ನುಡಿ ನಮನ ಕಾರ್ಯಕ್ರಮವು ನವಚೇತನ ಹಿರಿಯ ನಾಗರೀಕರ ಸಮುಚ್ಛಯದಲ್ಲಿ ನಡೆಯಿತು. ಪುಸ್ತಕ ಅನಾವರಣ ಮಾಡಿದ ಮುಂಬಯಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಸಂತ ಕುಮಾರ್ ತಾಳ್ತಜೆ ಮಾತನಾಡಿ, ಡಾ. ಬಡೆಕ್ಕಿಲ ಶ್ರೀಧರ್ ಭಟ್ ಅವರದ್ದು ವೃತ್ತಿಯಲ್ಲಿ ವಿಜ್ಞಾನ ಕ್ಷೇತ್ರವಾದರೂ

ಮಣಿಪುರದಲ್ಲಿ ಚರ್ಚ್ ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ಖಂಡಿಸಿ ಪುತ್ತೂರಿನಲ್ಲಿ ಸಿಐಟಿಯು ವತಿಯಿಂದ ಪ್ರತಿಭಟನೆ

ಪುತ್ತೂರು : ಮಣಿಪುರ ರಾಜ್ಯದಲ್ಲಿ ಮೀಸಲಾತಿ ಗಲಭೆ ಸೃಷ್ಠಿಸಿ ಚರ್ಚ್ ಮತ್ತು ಕ್ರಿಶ್ಚಿಯನರ ಮೇಲೆ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ಮತ್ತು ಮಣಿಪುರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಂತೆ ಆಗ್ರಹಿಸಿ ಪುತ್ತೂರಿನ ಆಡಳಿತ ಸೌಧದ ಎದುರು ಸಿಐಟಿಯು ಬೆಂಬಲಿತ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಗೌರವಾಧ್ಯಕ್ಷರಾದ ಕಾರ್ಮಿಕ ಮುಂದಾಳು

ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಗೃಹ ಸಚಿವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನಲ್ಲಿ ಪೊಲೀಸ್ ಅಧೀಕ್ಷರ ಕಛೇರಿಯನ್ನು ಪ್ರಾರಂಭಿಸುವ ಬಗ್ಗೆ ಸರಕಾರದ ಹಂತದಲ್ಲಿ ಈಗಾಗಲೇ ಅನುಮೋದನೆಯಾಗಿದೆ. ಕಂದಾಯ ಇಲಾಖೆಯಿಂದಲೂ ಸ್ಥಳ ಕಾಯ್ದಿರಿಸಲಾಗಿದೆ. ಸರಕಾರವು ಈ ವಿಚಾರವನ್ನು ಪರಿಗಣಿಸಿ ಎಸ್‍ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಶಾಸಕ ಆಶೋಕ್ ಕುಮಾರ್ ರೈ ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಪುತ್ತೂರಿಗೆ ಉಪವಿಭಾಗಕ್ಕೆ ಎಸ್‍ಪಿ ಕಚೇರಿಯನ್ನು

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಶಾಸಕ ಅಶೋಕ್ ಕುಮಾರ್ ರೈ ಸಭೆ

ಪುತ್ತೂರು: ಕಿಡ್ನಿ ರೋಗಿಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 6 ಡಯಾಲಿಸಿಸ್ ಮೆಷಿನ್ ಕಾರ್ಯಾಚರಿಸುತ್ತಿದ್ದು, ಮುಂದಿನ ವಾರದಲ್ಲಿ ಆರು ಡಯಾಲಿಸಿಸ್ ಮೆಷಿನ್ ರೋಟರಿ ಮೂಲಕ ಸರಕಾರಿ ಆಸ್ಪತ್ರೆಗೆ ಬರಲಿದೆ ಎಂದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಕಡಬದಲ್ಲಿ ಮೂರು ಮೆಷಿನ್ ಇದ್ದು ಸರಿಯಾಗಿ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್ – ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಾಣಿಯ ವಿದ್ಯಾನಗರದಲ್ಲಿರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾದ ಸಂಸ್ಥೆ. ಇದೀಗ ಈ ಶಾಲೆಯಲ್ಲಿ ನಾಳೆ ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷ ಪ್ರಹಲ್ಲಾದ್ ಶೆಟ್ಟಿ ಜೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಕ್ತಿ ಎಜುಕೇಶನಲ್ ಟ್ರಸ್ಟ್ನ ಸ್ಥಾಪಕ ಡಾ ಕೆಸಿ ನಾಯ್ಕ್,

ವಿಟ್ಲ : ವಿವಾಹಿತ ನೇಣ ಬಿಗಿದು ಆತ್ಮಹತ್ಯೆ

ವಿಟ್ಲ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಅಳಕೆಮಜಲು ಸಮೀಪ ನಡೆದಿದೆ. ಅಳಕೆಮಜಲು ನಿವಾಸಿ ಧೀರಜ್ (30) ಮೃತಪಟ್ಟ ವ್ಯಕ್ತಿ. ಧೀರಜ್ ಬಿ.ಸಿ.ರೋಡ್ ನ ಹೋಂಡಾ ಶೋ ರೂಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ವರುಷದ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪುತ್ತೂರು : ಅಕ್ಷಯ ಕಾಲೇಜಿನಲ್ಲಿ “ಯಕ್ಷಸಿಂಚನ”- ಯಕ್ಷಗಾನ ಕಲಾ ಸಂಘ ಉದ್ಘಾಟನೆ

ಪುತ್ತೂರು : ಅಕ್ಷಯ ಕಾಲೇಜಿನ ಯಕ್ಷಗಾನ ಕಲಾ ಸಂಘ ಯಕ್ಷಸಿಂಚನ ಉದ್ಘಾಟನೆಗೊಂಡಿತು, ಉದ್ಘಾಟಕರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಖ್ಯಾತ ಭಾಗವತರು ಹನುಮಗಿರಿ ಯಕ್ಷಗಾನ ಮೇಳ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು. ಗೆಜ್ಜೆಗಿರಿ ಮೇಳದ ಪ್ರಧಾನ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಅವರು ಮುಖ್ಯ ಅಥಿತಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಖ್ಯಾತ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆ