ವಾಮದಪದವು: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ಮಹಾರಥೋತ್ಸವವು ಸೋಮವಾರ ರಾತ್ರಿ ವೈಭವಯುತವಾಗಿ ಸಂಪನ್ನಗೊಂಡಿತು. ರಾತ್ರಿ ಬಲಿ ಉತ್ಸವ, ದೈವಗಳ ನೇಮೋತ್ಸವ, ಕಟೀಲು ಮೇಳದವರ ಯಕ್ಷಗಾನ ಬಯಲಾಟ ಹಾಗೂ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬಂಟ್ವಾಳ: ಹಿಜಾಬ್ ವಿವಾದ ಬಂಟ್ವಾಳ ತಾಲೂಕಿಗೂ ವ್ಯಾಪಿಸಿದೆ.ಶಾಲಾ ವಸ್ತ್ರ ಸಂಹಿತೆ ಜಾರಿಯಾಗಬೇಕು, ಕಾಲೇಜಿಗೆ ಸಮವಸ್ತ್ರ ಧರಿಸಿಯೇ ಆಗಮಿಸುವ ಎಂದು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಅವರಣದಲ್ಲಿ ಘೋಷಣೆ ಕೂಗಿದ ಘಟನೆ ವಾಮದಪದವುವಿನಲ್ಲಿ ನಡೆಯಿತು. ಕೇಸರಿ ಶಾಲು ಹಾಕಿಕೊಂಡು ಕಾಲೇಜು ಅವರಣದೊಳಗೆ ಆಗಮಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸ್ಕಾರ್ಪ್ ಧರಿಸಿ ಕಾಲೇಜಿಗೆ ಆಗಮಿಸುವುದನ್ನು ನಿರ್ಭಂಧಿಸಬೇಕು ಅಂತ ಘೋಷಣೆ ಕೂಗಿದರು. ವಾಮದಪದವು