Header Ads
Breaking News

ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ : ಬೇಲೂರು ತಹಶೀಲ್ದಾರ್ ನಟೇಶ್ ಸೂಚನೆ

ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕೋವಿಡ್-19 ಇಂದು ತಾಲೂಕಿನ ಬಹುತೇಕ ಹಳ್ಳಿಗಳಿಗೆ ವ್ಯಾಪಿಸಿದ್ದು ದಿನಕಳೆದಂತೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗ ತೊಡಗಿವೆ ಎಂದು ಬೇಲೂರು ತಹಸಿಲ್ದಾರ್ ನಟೇಶ್ ಹೇಳಿದರು.

ಅವರು, ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮ ಪಂಚಾಯಿತಿ ಮುಂಭಾಗ ನಡೆದ ಕೊರೊನಾ ವಾರಿಯರ್‍ಗಳ ಸಭೆಯಲ್ಲಿ ಮಾತನಾಡಿದರು. ಬಿಕ್ಕೋಡು ಹೋಬಳಿಯ ಲಕ್ಕುಂದ ಕೆಸಗೋಡು ಮದಘಟ್ಟ ಕೋಗಿಲೆ ಮನೆ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಂಕು ಮಿತಿಮೀರಿದ ಸಾಮಾಜಿಕ ಅಂತರ ಇದ್ದರೆ ಮಾತ್ರ ತಡೆಗಟ್ಟಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿದರೆ ಕೊರೋನಾ ರೋಗವನ್ನು ಹೋಗಲಾಡಿಸಲು ಸಾಧ್ಯ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ಮೇ ತಿಂಗಳ ಮೊದಲ ವಾರದಿಂದ ಸೋಂಕಿತರ ಪ್ರಮಾಣ ಹೆಚ್ಚಾಗ ತೊಡಗಿದ್ದು ತುರ್ತು ಸೇವೆಗಳನ್ನು ನೀಡಲು ಈಗಾಗಲೇ ಅರೇಹಳ್ಳಿಯಲ್ಲಿ ಕೋವಿಡ್ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಕಾಂತರಾಜ್, ಸದಸ್ಯರಾದ ಪುಟ್ಟರಾಜು, ಕುಮಾರ್ ವೃತ್ತ ನಿರೀಕ್ಷಕ ಶ್ರೀಕಾಂತ್ ಉಪ ತಹಶಿಲ್ದಾರ್ ಪ್ರದೀಪ್ ರಾಜಸ್ವ ನಿರೀಕ್ಷಕ ಅಸ್ಲಾಂ ಭಾಷಾ ವೈದ್ಯಾಧಿಕಾರಿ ಚಂಪಕ ಕಾರ್ಯದರ್ಶಿ ದೇವರಾಜ್ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Related posts

Leave a Reply

Your email address will not be published. Required fields are marked *