Header Ads
Breaking News

ಕನಿಷ್ಠ ಮೂರು ತಿಂಗಳ ವಿದ್ಯುತ್ ಬಿಲ್ ರಿಯಾಯಿತಿ ನೀಡಬೇಕು : ಮಾಜಿ ಎಂಎಲ್‍ಸಿ ಐವನ್ ಡಿಸೋಜಾ ಆಗ್ರಹ

ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದ ಆರ್ಥಿಕವಾಗಿ ತೊಂದರೆಗೀಡಾಗಿರುವ ಜನರಿಗೆ ಸಹಾಯ ನೀಡಲು ಸರಕಾರ ಮುಂದಾಗಬೇಕು ಮತ್ತು ತೆರಿಗೆ ವಿನಾಯಿತಿ ನೀಡಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ನ ಸಂಚಾಲಕ ಐವನ್ ಡಿಸೋಜ ಒತ್ತಾಯಿಸಿದ್ದಾರೆ.ivan dsouza press meet

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ಪ್ರದೇಶದ ಸರಕಾರ ಜನರ ಮನೆಬಾಗಿಲಿಗೆ ಅಗತ್ಯ ಸಾಮಗ್ರಿ ತಲುಪಿಸುತ್ತಿದೆ. ಮನೆಯಲ್ಲಿರುವವರಿಗೆ ನಾಲ್ಕು ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಇಂತಹ ಯಾವುದೇ ಯೋಜನೆಗಳಿಲ್ಲ. ಆದುದರಿಂದ ಕನಿಷ್ಠ ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ರಿಯಾಯಿತಿ ನೀಡಬೇಕು. ತೆರಿಗೆ ವಿನಾಯಿತಿ ನೀಡಬೇಕು. ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಶಿಧರ ಹೆಗ್ಡೆ, ಮುಹಮ್ಮದ್ ಕುಂಜತ್ತಬೈಲ್, ನವೀನ್ ಡಿಸೋಜ, ಅಪ್ಪಿ,ಕೆ.ಭಾಸ್ಕರ ರಾವ್, ಶಾಹುಲ್ ಹಮೀದ್, ದೀಕ್ಷಿತ್, ಅಶಿತ್ ಪಿರೇರ, ಆರಿಫ್ ಬಾವ, ಮುಹಮ್ಮದ್ ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *