Header Ads
Breaking News

ಕೊರೋನಾ ಚುಚ್ಚುಮದ್ದು ಪಡೆಯಲು ಹಿಂಜರಿಕೆ ಬೇಡ : ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಹೇಳಿಕೆ

ಜಗತ್ತನ್ನೇ ಬೆನ್ನು ಬಿಡದೆ ಕಾಡುತ್ತಿರುವ ಕೊರೋನಾ ಎರಡನೇ ಅಲೆ ಜನರನ್ನು ಭಯಭೀತರನ್ನಾಗಿಸುತ್ತಿದೆ. ಈ ಬಗ್ಗೆ ಜಾಗೃತರಾಗುವ ಸರದಿ ನಮ್ಮದಾಗಿದ್ದು ಇದಕ್ಕಾಗಿ ಆರೋಗ್ಯ ಇಲಾಖೆಯ ಮೂಲಕ 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ಚುಚ್ಚು ಮದ್ದನ್ನು ಯಾವುದೇ ಹಿಂಜರಿಕೆ ಇಲ್ಲದೆ ಪಡೆಯುವ ಮೂಲಕ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವಂತ್ತೆ ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದ್ದಾರೆ.


ಅವರು ಕಾಪು ಪಡು ಸರ್ಕಾರಿ ಶಾಲೆಯ ಕೊಠಡಿಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ ಕೊರೋನಾ ವಿರುದ್ಧ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸದುಪಯೋಗವನ್ನು ಗ್ರಾಮದ 51 ಮಂದಿ ಪಡೆದುಕೊಂಡಿದ್ದು, ಇದರಲ್ಲಿ ಮಹಿಳೆಯರೇ ಸಿಂಹಪಾಲು ಎಂಬುದು ಗಮನಾರ್ಹ. ಈ ಸಂದರ್ಭ ವೈದ್ಯಾಧಿಕಾರಿ ಸುಧಾಕರ್ ಸಹಿತ ಕಾಪು ಪುರಸಭಾ ಸದಸ್ಯರು, ಸ್ಥಳೀಯ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *