Header Ads
Breaking News

ಕೋವಿಡ್ ತುರ್ತು ಪರಿಸ್ಥಿತಿ ಘೋಷಿಸಿ ಉಚಿತ ಚಿಕಿತ್ಸೆ ನೀಡಿ : ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್

ಕೇಂದ್ರ ಸರ್ಕಾರ ಈ ದೇಶದಲ್ಲಿರುವ ಪ್ರಮುಖ ಆಸ್ಪತ್ರೆಗಳ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡು ಕೊರೋನಾ ಪಂಡಮಿಕ್ ಅಡಿಯಲ್ಲಿ ಯಾವುದೇ ವರ್ಗದವರು ಆಸ್ಪತ್ರೆಗೆ ದಾಖಲಾಗುತ್ತಾರೆ ಅವರಿಗೆ ಪಂಡಮಿಕ್ ತುರ್ತು ಪರಿಸ್ಥಿತಿ ಘೋಷಿಸಿ ಅವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿದರು.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ದೇಶದ ಎಲ್ಲಾ ಆಸ್ಪತ್ರೆಗಳ ಆಡಳಿತವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂದು ಹೇಳಿದರು. ನಂತರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಅವರು, ಕೇಂದ್ರದ ಬಿಜೆಪಿ ಸರಕಾರ ರಾಜ್ಯದ ಬಿಜೆಪಿ ಸರಕಾರ ಪ್ರಚಾರದಲ್ಲಿ ಗೆದ್ದು ಬಂದಿರುತ್ತದೆ ಅವರ ಕಾರ್ಯ ಸಾಧನೆ ಕೇವಲ ಶೂನ್ಯ, 2014 ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕಾಗಿ 20 ಸಾವಿರ ಕೋಟಿ ಖರ್ಚು ಮಾಡಿರುತ್ತಾರೆ. ಈ ಸಲ ಕಾರ್ಯಕ್ಕೆ ದೂರದೃಷ್ಟಿ ಎಂಬುದೇ ಇಲ್ಲ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಕಾರ್ಕಳ ಕಾಂಗ್ರೆಸ್ ನಗರ ಅಧ್ಯಕ್ಷರಾದ ಮಧು, ಪ್ರಭಾಕರ ಬಂಗೇರ ಸುಧಾಕರ ಕೋಟ್ಯಾನ್ ಜಾರ್ಜ್ ಕ್ಯಾಸ್ಟಲಿನೋ, ಮೊಹಮ್ಮದ್ ಅಸ್ಲಾಂ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *