Header Ads
Breaking News

ಕೋವಿಡ್ ಲಾಕ್‍ಡೌನ್ ಮಧ್ಯೆ : ಕೃತಕ ನೆರೆ ಸಂಕಷ್ಠ

ಕೋವಿಡ್ ಲಾಕ್‍ಡೌನ್ ಮಧ್ಯೆ ಉಡುಪಿಯ ಕಪ್ಪೆಟ್ಟು ಪರಿಸರದ ಜನ ಮತ್ತೊಂದು ಸಂಕಷ್ಟ ವನ್ನು ಎದುರಿಸಲು ಸಜ್ಜಾಗಿ ನಿಂತಿದ್ದಾರೆ.ಹೌದು ಉಡುಪಿ ನಗರ ಸಭೆ ಹಾಗೂ ಅಂಬಲಪಾಡಿ ಗ್ರಾಮ ಪಂಚಾಯತ್ ನಿರ್ಲಕ್ಷ್ಯದಿಂದ ಈ ಬಾರಿಯ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿ ಕಿನ್ನಿಮುಲ್ಕಿ ಬಳಿಯ ಕಪ್ಪೆಟ್ಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಧರ್ಭ ದೊಡ್ಡದಾದ ಚರಂಡಿಗೆ ಸಣ್ಣ ಪೈಪುಗಳನ್ನ ಹಾಕಿದ್ದೆ ಇದಕ್ಕೆಲ್ಲ ಕಾರಣವಾಗಿದೆ.ನಗರದ ಅಂಬಲಪಾಡಿ, ಅಜ್ಜರಕಾಡು ,ಕಿನ್ನಿಮುಲ್ಕಿಯಿಂದ ಹರಿದು ಬರುವ ಮಳೆ ನೀರು ಇದೇ ಪ್ರದೇಶದಲ್ಲಿ ಸೇರುತ್ತದೆ.ಅದ್ರೆ ಹೆದ್ದಾರಿ ಕಮಾಗಾರಿ ಸಂಧರ್ಭ ಕಿರಿದಾದ ಪೈಪುಗಳನ್ನು ಹಾಕಿರುವ ಕಾರಣ ನೀರು ಹರಿಯಲು ಸಾಧ್ಯವಾಗದೇ ಇಡೀ ಪ್ರದೇಶ ಕೃತಕ ನೆರೆ ಸೃಷ್ಟಿಯಾಗಿ ಮುಳುಗಡೆ ಹೊಂದುತ್ತದೆ.

ಕಳೆದ ಬಾರಿ ಮಳೆಗಾಲಕ್ಕೂ ಮುಂಚೆ ಅಂಬಲಪಾಡಿ ಗ್ರಾಮ ಪಂಚಯತ್ ಹಾಗೂ ನಗರ ಸಭೆಯ ಅಧಿಕರಿಗಳು ,ಸದಸ್ಯರುಗಳಿಗೂ ಮನವಿ ಮಾಡಲಾಗಿತ್ತು.ಅದ್ರೆ ಎರಡು ಕಡೆ ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸಿ ನೀರು ಹರಿದು ಹೋಗಲು ವೆವಸ್ಥೆ ಮಾಡದೆ ಹೋದದ್ದರಿಂದ ಇಡೀ ಊರೇ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು.ಇಲ್ಲೊಂದು ನಗರ ಸಭೆಗೆ ಸೇರಿದ ಡ್ರೈನೇಜ್ ಗೇಟ್ ವಾಲ್ ಇದ್ದು ,ಇದೇ ಚರಂಡಿ ಮೂಲಕ ಕೊಳಚೆ ನೀರನ್ನು ಕೂಡ ಬಿಡಲಾಗುತ್ತಿದೆ.ಮಳೆ ನೀರು ಕೊಳಚೆ ನೀರು ಹರಿದ ಪರಿಣಾಮ ಹಾಕಲಾಗಿರುವ ಪೈಪಿನಲ್ಲಿ ಹೂಳು ತುಂಬಿ ಕೊಂಡಿದ್ದು ,ಸಂಪೂರ್ಣವಾಗಿ ಮುಚ್ಚಿಹೋಗಿದೆ.ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನ ಅಗಿಲ್ಲ.ಬದಲಿಗೆ ಅದು ಪಂಚಾಯತ್ ಕೆಲಸ ಅಂತಾ ನಗರ ಸಭೆ ಹೆಳಿದ್ರೆ ,ನಗರ ಸಭೆ ಕೆಲಸ ಅಂತಾ ಪಂಚಯತ್ ಹೇಳಿ ಕೈ ತೊಳೆದು ಕೊಳ್ಳುತ್ತಿದೆ.ತಮಾಷೆಯೇನಂದ್ರೆ ಹೂಳು ತೆಗೆಯಬೇಕಾದ ಗ್ರಾಮ ಪಂಚಾಯತ್ ಮಾತ್ರ ಸುಮಾರು ಒಂದು ಲಕ್ಷ ನಾಲ್ವತ್ತು ಸಾವಿರ ರೂಪಾಯಿಗಳ ಚರಂಡಿಯ ತಡೆಗೋಡೆ ನಿರ್ಮಿಸಿದೆ .ಅದ್ರೆ ಚರಂಡಿ ಹೂಳೆತ್ತಲು ಮಾತ್ರ ನಗರ ಸಭೆ ಗೆ ಬೆರಳು ತೋರಿಸುತ್ತಿದೆ.ಇವರಿಬ್ಬರ ಜಗಳದಿಂದ ಮತ್ತೆ ನೆರೆ ನೀರು ತುಂಬಿ ಮುಳುಗುವ ಭಯದಲ್ಲಿ ಸ್ಥಳೀಯರು ಸ್ವಂತ ಖರ್ಚಿನಲ್ಲಿ ಹೂಳನ್ನು ಎತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನೂ ವಿಶೇಷ ಏನಂದ್ರೆ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ಇದ್ರೂ ..ಮಳೆ ಬಂದಾಗ ನಗರ ಸಭೆಯ ಪ್ರದೇಶಗಳು ಸಂಪೂರ್ಣ ಮುಳುಗಡೆ ಗೊಳ್ಳುತ್ತದೆ. ಮಾಧ್ಯಮಗಳಲ್ಲಿ ಮಳೆಗಾಲಕ್ಕೆ ನಾವು ಸಂಪೂರ್ಣ ಸಿದ್ದವಾಗಿದ್ದೇವೆ ಎಂದು ಹೇಳಿಕೊಳ್ಳುವ ನಗರ ಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸ್ಥಳೀಯರ ಸಮಸ್ಯೆ ಬಗೆ ಹರಿಸಿಕೊಡುವಂತೆ ವಿನಂತಿಸಿಕೊಂಡಿದ್ದಾರೆ

 

Related posts

Leave a Reply

Your email address will not be published. Required fields are marked *