Header Ads
Breaking News

ಕೋವಿಡ್ ಸೋಂಕು ತಡೆಗೆ ಜನರ ಬೆಂಬಲ ಅಗತ್ಯ :ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಾಜಶ್ರೀ ಕಿಣಿ ಹೇಳಿಕೆ

ನಮ್ಮ ಆರೋಗ್ಯ ಕರ್ತರು ಮನೆಮನೆಗೆ ತೆರಳಿ ಆರೋಗ್ಯದ ಬಗ್ಗೆ ವಿಚಾರಿಸಿದರೂ, ಆರೋಗ್ಯ ಸಮಸ್ಯೆಯ ಬಗ್ಗೆ ಮನೆಮಂದಿ ಅವರಲ್ಲಿ ಹೇಳಿಕೊಳ್ಳುತ್ತಿಲ್ಲ, ಆ ಕಾರಣದಿಂದ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದು, ಈ ಬಗ್ಗೆ ಜನರು ನಮ್ಮೊಂದಿಗೆ ಸಹಕರಿಸಿದರು ಎಂದಾದರೆ ಕೋವಿಡ್ ತಡೆಗೆ ಅನುಕೂಲವಾಗುತ್ತೆ ಎಂಬುದಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈಧ್ಯಾಧಿಕಾರಿ ರಾಜಶ್ರೀ ಕಿಣಿ ಹೇಳಿದ್ದಾರೆ.

ಅವರು ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಕೋವಿಡ್-19 ವಿರುದ್ಧದ ಕಾರ್ಯಪಡೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಇಷ್ಟರಲ್ಲೇ ಹೆಜಮಾಡಿಯ ಎಸ್ ಎಸ್ ರಸ್ತೆ ಪ್ರದೇಶವನ್ನು ಕಂಟನ್ಮೆಂಟ್ ವಲಯವೆಂದು ಘೋಷಿಸಲಾಗಿದೆ, ಕಾರಣ ಒಂದೇ ಮನೆಯ ಐದು ಮಂದಿಗೆ ಸೋಂಕು ತಗುಲಿದ್ದರಿಂದ ಈ ಘೋಷಣೆಯಾಗಿದ್ದು, ಇದೀಗ ನಿಯಂತ್ರಣದಲ್ಲಿದೆ. ಅಲ್ಲದೆ ಎರಡನೇ ಬಾರಿಯ ಲಸಿಕೆ ಪಡೆಯಲು ಬಾಕಿ ಇದ್ದವರಿಗೆ ದೂರವಾಣಿ ಕರೆ ಮಾಡಿ ಕರೆಯಿಸಿಕೊಳ್ಳಲಾಗಿದ್ದು, ಇದೀಗ 18 ರಿಂದ 44 ವರ್ಷದೋಳಗಿನವರಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಲಸಿಕೆ ನೀಡುತ್ತಿದ್ದು ಅದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದ ಅವರು, ನಮ್ಮ ಆರೋಗ್ಯ ಕೇಂದ್ರದ ಹೆಸರಿನ ನಕಲಿ ಐಡಿಗಳನ್ನು ತೋರಿಸಿ ಪ್ರಯಾಣಿಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಕೇಂದ್ರದ ಸೀಲ್ ಮತ್ತು ನನ್ನ ಸಹಿ ಹಾಗೂ ಅವರ ಐಡಿ ಕಾರ್ಡಿನ ಸ್ಕ್ಯಾನ್ ಮಾಡಿದ ಪ್ರತಿ ಸಹಿತ ಪ್ರಯಾಣ ಪತ್ರವನ್ನು ನೀಡುತ್ತಿದ್ದು ಈ ಬಗ್ಗೆ ಪರಿಶೀಲಿಸುವಂತ್ತೆ ಸಭೆಯಲ್ಲಿದ್ದ ಪೊಲೀಸರಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾ.ಪಂ. ಸದಸ್ಯರು ಹಾಗೂ ಪಿಡಿಓ ಇದ್ದರು.

Related posts

Leave a Reply

Your email address will not be published. Required fields are marked *