Header Ads
Breaking News

ಪಡುಬಿದ್ರಿಯ ರಸ್ತೆಯಂಚಿನಲ್ಲಿ ಜಲ್ಲಿಕಲ್ಲುಗಳ ರಾಶಿ : ಗುತ್ತಿಗೆದಾರ ನಾಪತ್ತೆ.. ಅಧಿಕಾರಿಗಳು ಮೌನ..

ಒಂದು ತಿಂಗಳ ಹಿಂದೆ ಅಗೆದು ಹಾಕಲಾದ ರಸ್ತೆಯಂಚು, ರಸ್ತೆಯಲ್ಲೇ ಜಲ್ಲಿಕಲ್ಲುಗಳ ರಾಶಿ, ನಿತ್ಯ ಧೂಳಿನ ಅಭಿಷೇಕ, ಈ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ನಾಪತ್ತೆ, ಅಧಿಕಾರಿಗಳ ಗಮನಕ್ಕೆ ತಂದರೂ ಗಾಢ ಮೌನ..ಇದೆಲ್ಲಾ ನಡೆಯುತ್ತಿರುವುದು ಪಡುಬಿದ್ರಿಯ ದೇವಳ ಮುಖ್ಯ ರಸ್ತೆಯಲ್ಲಿ.

ಪಡುಬಿದ್ರಿ ಗ್ರಾಮ ದೇಗುಲದ ವಾರ್ಷಿಕ ಜಾತ್ರೆಗೆ ಇನ್ನೇನು ಕೆಲವೇ ದಿನಗಳು ಇದೆ ಎನ್ನುವಾಗ ಕಾಮಗಾರಿ ಆರಂಭಿಸಲಾಯಿತು, ಕೆಲ ದಿನಗಳ ಕಾಮಗಾರಿ ನಡೆಯುತ್ತಿದಂತೆ ಗುತ್ತಿಗೆದಾರ ಕಿಶೋರ್ ಗುರ್ಮೆ ಎಂಬವರು ಕಾರ್ಮಿಕರೊಂದಿಗೆ ನಾಪತ್ತೆ, ಅಗೆದು ಹಾಕಲಾದ ರಸ್ತೆಯ ಅಂಚಿನ ಹೊಂಡಕ್ಕೆ ಬಿದ್ದು ಅದೆಷ್ಟೋ ಮಂದಿ ಗಾಯಗೊಂಡರು, ಜಾತ್ರೆಯ ಸಂದರ್ಭದಲ್ಲಂತ್ತೂ ಭಕ್ತಾಧಿಗಳು ಪಟ್ಟ ಬವಣೆ ದೇವರಿಗೆ ಪ್ರೀತಿ ಎಂಬಂತ್ತಿತ್ತು. ರಸ್ತೆಯ ಮಧ್ಯೆಭಾಗದಲ್ಲೇ ಜಲ್ಲಿಕಲ್ಲು ರಾಶಿ.. ವಾಹನಗಳು ರಸ್ತೆಬಿಟ್ಟು ಮಣ್ಣ ರಸ್ತೆಯಲ್ಲಿ ಅನಿರ್ವಾಯವಾಗಿ ಸಂಚರಿಸುತ್ತಿರುವುದರಿಂದ ಆ ಭಾಗದ ನಿವಾಸಿಗಳಿಗೆ ಸಹಿತ ಸಾರ್ವಜನಿಕರಿಗೆ ಧೂಳಿನ ಅಭಿಷೇಕವಾಗುತ್ತಿದೆ. ಗುತ್ತಿಗೆದಾರನೋರ್ವ ಈ ರೀತಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಕಾಮಗಾರಿ ನಡೆಸಿದ್ದೇ ಆದಲ್ಲಿ, ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ ಬೇಕಾದ ಅಧಿಕಾರಿಗಳು ಮೌನವಾಗಿದ್ದು, ಆತನ ದುರ್ನಡತೆಗೆ ಸಹಕರಿಸಿದ್ದೇ ಅಧಿಕಾರಿಗಳು ಮಾಡಿದ ತಪ್ಪು ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತ್ತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *