Header Ads
Breaking News

ಮಂಜೇಶ್ವರದಲ್ಲೊಂದು ಫ್ಲೆಕ್ಸ್ ಪ್ರತ್ಯಕ್ಷ

ಮಂಜೇಶ್ವರ : ವಿಧಾನ ಸಭಾ ಚುನಾವಣೆಯ ಫಲಿತಾಂಶದ ಬಳಿಕ ಮಂಜೇಶ್ವರದ ರಾಗಂ ಜಂಕ್ಷನ್ ಪರಿಸರದಲ್ಲಿ ರಾಜಕೀಯ ನೇತಾರರಾದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹಾಗೂ ನೂತನವಾಗಿ ಆಯ್ಕೆಯಾದ ಮಂಜೆಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರಿಗೆ ಅಭಿನಂದನೆ ಸಲ್ಲಿಸುವ ರೀತಿಯಲ್ಲಿ ಪ್ರತ್ಯಕ್ಷ ಗೊಂಡ ಫ್ಲೆಕ್ಸ್ ನೋಡುಗರಿಗೂ ರಾಜಕೀಯ ನೇತಾರರಿಗೂ ತಲೆ ನೋವಾಗಿ ಪರಿಣಮಿಸಿದೆ.

ಈ ಬಗ್ಗೆ ಕಾಸರಗೋಡಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಜೇಶ್ವರದ ಅಭ್ಯರ್ಥಿ ಕೆ ಸುರೆಂದ್ರನ್ ಮಂಜೆಶ್ವರದಲ್ಲಿ ಮುಸ್ಲಿಂ ಲೀಗ್ ಹಾಗೂ ಎಡರಂಗದ ರಹಸ್ಯ ಒಪ್ಪಂದಕ್ಕೆ ಇದುವೇ ಸಾಕ್ಷಿಯಲ್ಲವೇ. ಎಡರಂಗದ ಬೆಂಬಲದೊಂದಿಗೆ ಲೀಗ್ ಅಭ್ಯರ್ಥಿ ಜಯಶಾಲಿಯಾಗಿರುವುದಾಗಿ ಅರೋಪಿಸಿದ್ದಾರೆ. ಫ್ಲೆಕ್ಸ್ ನ ಇಬ್ಬರು ನೇತಾರರ ಕೆಳಗಡೆ ಐದು ಮಂದಿಯ ಭಾವಚತ್ರವನ್ನು ಲಗತ್ತಿಸಲಾಗಿದೆ. ಆದರೆ ಇವರ ಪೈಕಿ ಯಾರೂ ಯಾವುದೇ ರಾಜಕೀಯ ಪಕ್ಷದ ಸದಸ್ಯತ್ವವನ್ನು ಪಡೆದವರಿಲ್ಲವಾದರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲವನ್ನು ನೀಡಿದವರಾಗಿರುವುದಾಗಿ ತಿಳಿದು ಬಂದಿದೆ. ಎಂದರು. ಆದರೆ ಈ ಫ್ಲೆಕ್ಸ್ ವಿವಾದವಾಗುತಿದ್ದಂತೆ ಸಿಪಿಎಂ ರಾಜ್ಯ ಸಮಿತಿಯ ನಿರ್ದೇಶದಂತೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

Leave a Reply

Your email address will not be published. Required fields are marked *