Header Ads
Breaking News

ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ತೊಂದರೆ : ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಕುಟುಂಬಗಳು

ಮಂಜೇಶ್ವರ: ಹಳ್ಳದಲ್ಲಿ ಶೇಖರಣೆಯಾಗುತ್ತಿರುವ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮಂಜೇಶ್ವರ ಗ್ರಾ.ಪಂ ಏಳನೇ ವಾರ್ಡ್ ವ್ಯಾಪ್ತಿಯಲ್ಲಿ ರುವ ಪಳ್ಳಂ ಎಂಬ ಸ್ಥಳದಲ್ಲಿ ಸುಮಾರು ಹತ್ತರಷ್ಟು ಕುಟುಂಬಗಳು ಮನೆಯನ್ನು ಕಳೆದು ಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಇನ್ನು ಆರಂಭವಾಗುವ ಮಳೆಗಾಲಕ್ಕಿಂತ ಮುಂಚಿತವಾಗಿ ಇದ್ಕಕೊಂಡು ಶಾಶ್ವತ ಪರಿಹಾರವನ್ನು ಮಾಡಿ ಕೊಡುವಂತೆ ಕಾಲನಿವಾಸಿಗಳು ಆಗ್ರಹಿಸಿದ್ದಾರೆ.

ದೈವಸ್ಥಾನವೊಂದರ ಟ್ರಸ್ಟಿಯೊಬ್ಬರ ಸ್ಥಳವೊಂದರ ಸಮೀಪದಲ್ಲಿ ಹಳ್ಳವೊಂದು ಅನಾಧಿಕಾಲದಿಂದಲೇ ಇದ್ದರೂ, ಅದಕ್ಕೆ ಆವರಣಗೋಡೆಯನ್ನು ಕಟ್ಟಲಾಗಿತ್ತು. ಆ ದಿನಗಳಲ್ಲೂ ಮಳೆ ನೀರು ಹರಿದು ಬರುತ್ತಿದ್ದರೂ ಯಾವುದೇ ಹಾನಿ ಸಂಭವಿಸುತ್ತಿರಲಿಲ್ಲ. ಇದೀಗ ಅಲ್ಲಿಯ ಆವರಣ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದರ ಸಮೀಪದಲ್ಲಿ ಸುಮಾರು ಹತ್ತರಷ್ಟು ಕುಟುಂಬಗಳು ಮಣ್ಣಿನಿಂದ ನಿರ್ಮಿಸಲಾದ ಮನೆಗಳಲ್ಲಿ ವಾಸಿಸುತ್ತಿವೆ. ಮಳೆ ಆರಂಭವಾದರೆ ಹಳ್ಳದಲ್ಲಿ ತುಂಬಿಕೊಳ್ಳುವ ನೀರು ಮನೆ ಭಾಗಕ್ಕೆ ಬಂದು ಒಂದು ವ್ಯಕ್ತಿಯಷ್ಟು ಎತ್ತರಕ್ಕೆ ಕಟ್ಟಿ ನಿಲ್ಲುವುದರ ಜೊತೆಗೆ ಮನೆಯೊಳಗೂ ನೀರು ನುಗ್ಗುತ್ತಿದೆ.

ಕಳೆದ ಸಲ ಮಳೆಗಾಲದಲ್ಲಿ ಕೆಲವೊಂದು ಮನೆಗಳ ಗೋಡೆಗಳು ಬಿದ್ದು ಹೋಗಿರುವುದಾಗಿ ಕಾಲನಿ ವಾಸಿಗಳು ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. ಆದರೆ ಈ ಸಲ ಸಂಬಂಧಪಟ್ಟವರು ಇದ್ಕಕೊಂದು ಪರಿಹಾರವನ್ನು ಕಾಣುವಂತೆ ಆಗ್ರಹಿಸಿದ್ದಾರೆ. ಮಳೆ ಆರಂಭವಾದರೆ ಮನೆ ಮಂದಿ ಹೊರಗಿಳಿಯುವುದೇ ಕಷ್ಟವಾಗಿದೆ . ಮಾತ್ರವಲ್ಲ ಸಣ್ಣ ಮಕ್ಕಳ ಜೀವ ಕೂಡಾ ಅಪಾಯದಂಚಿನಲ್ಲಿರುತ್ತದೆ. ಸ್ಥಳೀಯಾಡಳಿತ ಅಥವಾ ಶಾಸಕರ ಫಂಡ್ ನಿಂದ ಇದ್ಕಕೊಂಡು ಪರಿಹಾರವನ್ನು ಕಾಣಲು ಸಾಧ್ಯವಿರುವುದಾಗಿ ಇಲ್ಲಿಯ ಹಿರಿಯ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಳೆಗಾಲಕ್ಕಿಂತ ಮುಂಚಿತವಾಗಿ ಇದ್ಕಕೊಂಡು ಪರಿಹಾರ ಅನಿವಾರ್ಯವಾಗಿದೆ .
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply

Your email address will not be published. Required fields are marked *