Header Ads
Breaking News

ಮುತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಟಾಸ್ಕ್‍ ಫೋರ್ಸ್ ಸಭೆ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಚ್ಚೂರು ಪಂಚಾಯಿತಿನ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯು ಮುರಾರ್ಜಿ ದೇಸಾಯಿ ಕೊಂಪದವು, ನೆಲ್ಲಿತೀರ್ಥದಲ್ಲಿ ನಡೆಯಿತು.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಪಂಚಾಯತ್ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ತಂಡವು ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಹಾಗೂ ಕೋರೋನವನ್ನು ನಿಗ್ರಹಿಸಲು ಟಾಸ್ಕ್ ಫೋರ್ಸ್ ಸದಾಸನ್ನದ್ಧರಾಗಿ ಇದ್ದರೆ ಕೊರೋನವನ್ನು ನಿಯಂತ್ರಿಸಬಹುದು ಎಂದು ಶಾಸಕರು ತಿಳಿಸಿದರು. ಶಾಸಕರ ಜೊತೆಗೆ ತಹಶಿಲ್ದಾರ್ ಗುರುಪ್ರಸಾದ್, ಮಾಜಿ ಜಿ.ಪಂ.ಸದಸ್ಯರಾದ ಜನಾರ್ಧನ ಗೌಡ, ಪಂಚಾಯತ್ ಅಧ್ಯಕ್ಷರಾದ ಮೋಹಿನಿ, ಉಪಾಧ್ಯಕ್ಷರಾದ ನಾರಾಯಣ, ಪಂಚಾಯತ್ ಸದಸ್ಯರುಗಳು, ಡೆಪ್ಯುಟಿ ತಹಶಿಲ್ದಾರ್,ಕಂದಾಯ ಅಧಿಕಾರಿ, ಪೊಲಿಸ್ ಇಲಾಖಾಧಿಕಾರಿಗಳು, ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *