Header Ads
Breaking News

ಮೂಡುಬಿದರೆ ಪ್ರಾಥಮಿಕ ಆರೋಗ್ಯ ಕೇಂದ್ರ : ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

ಮೂಡುಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು, ಶಿರ್ತಾಡಿ, ನೆಲ್ಲಿಕಾರು, ಬೆಳುವಾಯಿ ಹಾಗೂ ಪಾಲಡ್ಕ ಆರೋಗ್ಯ ಕೇಂದ್ರಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಕೋವಿಡ್ ಹಾಗೂ ಆರೋಗ್ಯ ಸೇವೆಯ ಬಗ್ಗೆ ಪರಿಶೀಲಿಸಿದರು. ಕೋವಿಡ್ ಪಾಸಿಟಿವ್, ಲಸಿಕೆ ಬಗ್ಗೆ ಆಯಾ ಪ್ರಾಥಮಿಕ ಕೇಂದ್ರಗಳ ಆರೊಗ್ಯ ಅಧಿಕರಿಗಳಿಂದ ಮಾಹಿತಿ ಪಡೆದರು.


ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸೇವೆಗಳಗೋಸ್ಕರ ತುರ್ತು ವಾಹನಗಳು ಬೇಕಾದಲ್ಲಿ ಗ್ರಾಮ ಪಂಚಾಯಿತಿಯಿಂದವಾಹನ ವ್ಯವಸ್ಥೆ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಕುರಿತಾದ ಆದೇಶ ಹೊರಟಿದ್ದು ತಕ್ಷಣವೇ ಅದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆರೋಗ್ಯ ಕೇಂದ್ರಗಳಿಗೆ ತಲುಪಲಿದೆ. ತಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬಂದಿ ಕೊರತೆ ಹಾಗೂ ಆರೋಗ್ಯ ಸೇವಾ ವಿಭಾಗಗಳ ಸಿಬಂದಿಗೆ ಸಂಬಳ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಜಿಪಂ ಸದಸ್ಯ ಸುಚರಿತ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ದಿವ್ಯವರ್ಮ ಬಲ್ಲಾಳ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *