Header Ads
Breaking News

ಸಾರ್ವಜನಿಕರು ಸರ್ಕಾರದ ಆದೇಶವನ್ನು ಪಾಲಿಸಬೇಕು : ಅಥಣಿಯ ಪಿಎಸ್‍ಐ ಕುಮಾರ್ ಹಡಕರ ಹೇಳಿಕೆ

ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಬೇಕೆಂದು ಅಥಣಿಯ ಪಿಎಸ್‍ಐ ಕುಮಾರ್ ಹಡಕರ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಾದ್ಯಂತ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯಿಂದ ಮುಂಜಾನೆ 6:00 ವರೆಗೆ ಅಂಗಡಿಗಳನ್ನು ಸರ್ಕಾರ ಬಂದ್ ಮಾಡಿಸಿದೆ. ಹಾಲು, ಹಣ್ಣು ,ತರಕಾರಿ,ಔಷಧಿ, ದಿನಸಿ, ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಮೇ 4ರ ವರೆಗೆ ಬಂದ್ ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಅಥಣಿ ಪಟ್ಟಣದ ವ್ಯಾಪಾರಸ್ಥರು ಹಾಗೂ ಸಮಾಜಸೇವಕರಾದ ರಾಮನಗೌಡ ಪಾಟೀಲ ಮಾತನಾಡಿ, ಸರ್ಕಾರದ ಆದೇಶವನ್ನು ಪಾಲಿಸುವುದರ ಜೊತೆಗೆ ಮಹಾಮಾರಿ ಕೋವಿಡ್ ಎರಡನೇ ಅಲೆಯನ್ನು ಹೊಡೆದೋಡಿಸುವಲ್ಲಿ ಅಧಿಕಾರಿಗಳ ಜೊತೆ ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ಅದು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ದುಂಡಪ್ಪಾ ಕೋಮಾರ,ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಪುರಸಭೆ ಕಾರ್ಮಿಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *