Header Ads
Breaking News

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ

Primary Health Center of Suratkal

ಸುರತ್ಕಲ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯಿತು. ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳುವವರಿಗೆ ಆದ್ಯತೆಯನ್ನು ನೀಡಲಾಗಿತ್ತು.ಸುರತ್ಕಲ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ. ಇನ್ನು ಲಸಿಕೆ ಪಡೆಯಲು ಬರುವ ಜನತೆಗೆ ಶೀಟ್ ಅಳವಡಿಸಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಶಾಸಕ ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಮಾಡಲಾಗಿತ್ತು.Primary Health Center of Suratkal
ಈ ಸಂದರ್ಭದಲ್ಲಿ ಮಂಗಳೂರು ಪಾಲಿಕೆಯ ಕಾರ್ಪೋರೇಟರ್ ಅರುಣ್ ಚೌಟ ಅವರು ಮಾತನಾಡಿ, ಸುರತ್ಕಲ್ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎರಡನೇ ಡೋಸ್ ಪಡೆದುಕೊಳ್ಳುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ ಎಂದರು.Primary Health Center of Suratkal
ಇನ್ನು ಸ್ಥಳೀಯರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಲಸಿಕೆ ಪಡೆದುಕೊಳ್ಳಲು ಬರುವವರಿಗೆ ಅಚ್ಚುಕಟ್ಟಾಗಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಿರುದರಿಂದ ಜನತೆಗೆ ತುಂಬಾ ಉಪಯೋಗವಾಗಿದೆ ಎಂದು ಹೇಳಿದರು.ಈ ಸಂದರ್ಭ ಸ್ಥಳೀಯ ಕಾರ್ಪೋರೇಟರ್ ಸರಿತಾ, ಲೋಕೇಶ್, ಶ್ವೇತಾ, ಆರೋಗ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *