ಅ.9ರಂದು ಕನ್ನಡಸೇನೆ ಕರ್ನಾಟಕ ದ.ಕ ಜಿಲ್ಲಾ ಕಚೇರಿ ಉದ್ಘಾಟನೆ

ಕನ್ನಡ ನಾಡು ನುಡಿ,ಜಲ ಸಂರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಮತ್ತಿತರ ನ್ಯಾಯಯುತ ಬೇಡಿಕೆಗೆಹೋರಾಟ ನಡೆಸುತ್ತಾ ಬರುತ್ತಿರುವ ಕನ್ನಡ ಸೇನೆ ಕರ್ನಾಟಕ ಇದರ
ದಕ್ಷಿಣಕನ್ನಡ ಜಿಲ್ಲಾ ಕಚೇರಿ” ಉದ್ಘಾಟನೆ ಸಮಾರಂಭ ಅ.9ರಂದು ಬೆಳಗ್ಗೆ 11.೦೦ ಗಂಟೆಗೆ ಕೂಳೂರಿನ ವ್ಯವಸಾಯ ಸೇವಾ ಸಹಕಾರಿ ಸಭಾಂಗಣದಲ್ಲಿ ಜರಗಲಿದೆ ಎಂದು ಕನ್ನಡ ಸೇನೆ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು

ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶ್ರೀ ಕನ್ನಡ ಸಾಹಿತ್ಯಪರಿಷನ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ದಕ್ಷಿಣಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ್ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದಾರೆ.

ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಯನ್ನು ಬಯಸುವ ಮತ್ತು ಹಿತ ಕಾಯುವ ಮಹತ್ತರ ಉದ್ದೇಶವಿಟ್ಟುಕೊಂಡು ಸ್ಮಾಪನೆಯಾದ ಕನ್ನಡ ಸೇನೆ ಕರ್ನಾಟಕಕ್ಕೆ 35 ವರ್ಷಗಳು ಸಂದಿವೆ.
2013ರಲ್ಲಿ ಪುತ್ತೂರಿನಲ್ಲಿ ಕನ್ನಡ ಸೇನೆ ಅಸ್ಥಿತ್ವಕ್ಕೆ ಬಂದು ಸರಕಾರಿ ಮೆಡಿಕಲ್ ಕಾಲೇಜು ತರುವಲ್ಲಿ ನಿರ್ಣಾಯಕ ಹೋರಾಟ ಮಾಡಿದೆ. ಹಲವಾರು ಹೋರಾಟ ಮಾಡಿಕೊಂಡು ಜನತೆಗೆ ನ್ಯಾಯಯುತ ಹಕ್ಕು ಒದಗಿಸುವಲ್ಲಿ ಸಫಲವಾಗಿದೆ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಕೇಶವ,ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ,ಬೆಳ್ತಂಗಡಿ ಘಟಕ ಅಧ್ಯಕ್ಷ ಗುರುಪ್ರಸಾದ್,ಸುರತ್ಕಲ್ ಘಟಕದ ಸಂಜೀವ ಸುವರ್ಣ,ಪ್ರಧಾನ ಕಾರ್ಯದರ್ಶಿ ಸುರೇಶ್ ಕುಂಬ್ಳೆ,ಕಾನೂನು ಸಲಹೆಗಾರ ನ್ಯಾಯವಾದಿ ಶ್ರೀಧರ ಪೂಜಾರಿ,ಪ್ರಧಾನ ಕಾರ್ಯದರ್ಶಿ ಸುಖೇಶ್ ಮಾಲಾಡಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.