ದಲಿತ ಯುವತಿಯ ನಕಲಿ ಸಹಿ ಬಳಸಿ ಸುಳ್ಳು ದೂರು : ತನಿಖೆಗೆ ಜಿಲ್ಲಾ ದಲಿತ ಸೇವಾ ಸಮಿತಿ ಆಗ್ರಹ

ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯೂರಿನ ಚೆನ್ನಪ್ಪ ಅಜಿಲಾಯ ಎಂಬವರ ಮೇಲೆ ಸ್ಥಳೀಯ ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಹೆಸರಿನಲ್ಲಿ ಅವರ ನಕಲಿ ಸಹಿ ಬಳಸಿ ಸುಳ್ಳು ದೂರು ನೀಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದ್ದಾರೆ.

ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚೆನ್ನಪ್ಪ ಅಜಿಲಾಯ ಅವರು ಕೆಸ್ಸಾರ್ಟಿಸಿ ಚಾಲಕರಾಗಿದ್ದು, ಅವರನ್ನು ತೇಜೋವಧೆ ಮಾಡುವ ನಿಟ್ಟಿನಲ್ಲಿ ದಲಿತ ಸಮುದಾಯವರಾದ ಜಯ ಅವರ ಹೆಸರನ್ನು ಬಳಸಿಕೊಂಡು ತನಗೆ ಚೆನ್ನಪ್ಪ ಅಜಿಲಾಯರಿಂದ ದೌರ್ಜನ್ಯ ಆಗಿದೆ ಎಂದು ಸಾರಿಗೆ ಸಚಿವರ ಸಹಿತ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳಿಗೆ ಹಾಗೂ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಸುಳ್ಳು ದೂರು ನೀಡಲಾಗಿದೆ. ಈ ಬಗ್ಗೆ ಊರಿನಲ್ಲಿ ಇಲ್ಲ ಸಲ್ಲದ ಅಪಪ್ರಚಾರ ನಡೆದು ಯುವತಿಗೂ ಅನ್ಯಾಯವಾಗಿದೆ. ಯುವತಿಯು ಠಾಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ನಾನು ಯಾವುದೇ ದೂರು ನೀಡಿರುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷ ಧನಂಜಯ ಬಲ್ನಾಡು, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಉಪಾಧ್ಯಕ್ಷ ಮನೋಹರ ಕೋಡಿಜಾಲು ಮತ್ತು ಚೆನ್ನಪ್ಪ ಅಜಿಲಾಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.