ಭವಿಷ್ಯದ ಭಾರತಕ್ಕೆ ನಮ್ಮ ಕೊಡುಗೆ ನೀಡೋಣ: ಲೆಫ್ಟಿನೆಂಟ್‌ ಕಮಾಂಡರ್‌ ಭರತ್‌ ಕುಮಾರ್‌

ಮಂಗಳೂರು: ಸಮಗ್ರಅಭಿವೃದ್ಧಿಯೊಂದಿಗೆಜಗತ್ತಿನಸೂಪರ್‌ ಪವರ್‌ ಆಗುವತ್ತದಿಟ್ಟಹೆಜ್ಜೆಇಟ್ಟಿರುವಭಾರತಕ್ಕೆ, ದೇಶದನಾಗರಿಕತನ್ನದೇಆದರೀತಿಯಲ್ಲಿಕೊಡುಗೆನೀಡಬಹುದು, ಎಂದುಎನ್‌ಸಿಸಿ ಯ ನೌಕಾದಳದ (5  ಕರ್ನಾಟಕನೌಕಾದಳಘಟಕ) ಕಮಾಂಡಿಂಗ್‌ ಆಫೀಸರ್‌ ಲೆಫ್ಟಿನೆಂಟ್‌ ಕಮಾಂಡರ್‌ ಭರತ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದವಿಶ್ವವಿದ್ಯಾನಿಲಯಕಾಲೇಜಿನಲ್ಲಿ 75ನೇ ಸ್ವಾತಂತ್ರೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಭಾರತಕ್ಕೆ ಶಿಸ್ತು, ಜವಾಬ್ದಾರಿ, ಪ್ರಾಮಾಣಿಕತೆ, ನೈತಿಕತೆಯಿರುವ ಶ್ರಮಜೀವಿ ಪ್ರಜೆಗಳ ಅಗತ್ಯವಿದೆ. ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕೊಡುಗೆ ನೀಡುವ ಸಂಕಲ್ಪ ತೊಡಬೇಕಿದೆ ಎಂದರು. ಕರಾವಳಿಯ ಸ್ವಾತಂತ್ರ್ಯಹೋರಾಟಗಾರರಾದ ಕಾರ್ನಾಡ್‌ ಸದಾಶಿವರಾಯರು, ಕಮಾಲಾದೇವಿ ಚಟ್ಟೋಪಾಧ್ಯಾಯ ಮೊದಲಾದವರನ್ನು ನೆನಪಿಸಿಕೊಂಡ ಅವರು, ಕೊವಿಡ್‌ ಯೋಧರು, ಶಿಕ್ಷಕರು ದೇಶದಬೆನ್ನೆಲುಬಿದ್ದಂತೆ ಎಂದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆಡಾ. ಅನಸೂಯರೈ, ಪಡೆದುಕೊಂಡ ಸ್ವಾತಂತ್ರ್ಯವನ್ನು ರಕ್ಷಿಸುವ ಯುವಜನಾಂಗ ಈಗದೇಶಕ್ಕೆ ಮುಖ್ಯ ವಿವಿಧ ಕ್ಷೇತ್ರಗಳಲ್ಲಿದ್ದು ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ, ಎಂದರು. ಭೂದಳ ಮತ್ತು ನೌಕಾದಳದ ವಿದ್ಯಾರ್ಥಿಗಳ ಕವಾಯತು ಗಮನಸೆಳೆಯಿತು.

ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ ಎಂ ಮತ್ತು ಡಾ. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಎನ್‌ಸಿಸಿಅಧಿಕಾರಿಗಳಾದ ಡಾ. ಲೆಫ್ಟಿನೆಂಟ್‌ ಡಾ. ಯತೀಶ್‌ ಕುಮಾರ್‌ (ನೌಕಾದಳ), ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್‌ ಡಾ. ಜಯರಾಜ್‌ ಎನ್‌ (ಭೂದಳ), ಎನ್‌ಎಸ್‌ಎಸ್‌ನಡಾ. ಸುರೇಶ್‌, ಕ್ರೀಡಾ ವಿಭಾಗದ ಮುಖ್ಯಸ್ಥಡಾ, ಕೇಶವಮೂರ್ತಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.