ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಕಾಮಗಾರಿ ; ಮೀನು ಮಾರಾಟ ಮಹಿಳೆಯರ ಆಕ್ರೋಶ

ಮಂಗಳೂರಿನ ಹೊರವಲಯದ ಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಕಾಮಗಾರಿಯ ಹಿನ್ನಲೆ ಪಕ್ಕದಲ್ಲಿದ್ದ ಮೀನು ಮಾರುಕಟ್ಟೆಯ ಮೆಲ್ಚಾವಣಿಯನ್ನು ತೆಗದು ಮಾರುಕಟ್ಟೆಯನ್ನು ನೆಲಸಮ ಮಾಡಲು ಹೊರಟಿರುವುದು ಮೀನು ಮಾರಾಟ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೊಜಾರವರು 2 ವರ್ಷದ ಹಿಂದೆ ಎಂಎಲ್‌ಸಿಯಾಗಿದ್ದ ಸಂದರ್ಭ ಎನ್‌ಹೆಚ್ 66 ಬೈಕಂಪಾಡಿಯಲ್ಲಿ ಮೀನುಗಾರ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನುದಾನ ನೀಡಿ ನಿರ್ಮಿಸಲ್ಪಟ್ಟ ಬೈಕಂಪಾಡಿ ಮೀನು ಮಾರುಕಟ್ಟೆ ಇದಾಗಿದ್ದು. ಈಗ ಸರ್ವಿಸ್ ರಸ್ತೆ ಕಾಮಗಾರಿಯ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಮೀನು ಮಾರುಕಟ್ಟೆಯ ಮೇಲ್ಚಾವಣಿಯನ್ನು ತೆಗೆದು ಮಾರುಕಟ್ಟೆಯನ್ನು ದ್ವಂಸ ಮಾಡಲು ಹೊರಟಿರುವುದು ಮೀನು ಮಾರಾಟ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.


ಈ ಬಗ್ಗೆ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿಯವರು ಮಾತನಾಡಿ 2 ವರ್ಷಗಳ ಹಿಂದೆ ಮೀನು ಮರಾಟ ಮಾಡುವ ಹೆಂಗಸರಿಗಾಗಿ ನಿರ್ಮಿಸಲ್ಪಟ್ಟ ಈ ಮಾರುಕಟ್ಟೆಯನು ಈಗ ಏಕಾಏಕಿ ಡೆಮೋಲಿಶ್ ಮಾಡಲು ಹೊರಟಿರುವುದು ಸರಿಯಲ್ಲ. ಮಳೆ, ಗಾಳಿ, ಕೊರೊನಾದಂತಹಾ ಈ ಸಂದರ್ಭದಲ್ಲಿ ಕಷ್ಟದಿಂದ ಜೀವನ ನಡೆಸುವ ಈ ಬಡ ಮಹಿಳೆಯರ ಕಷ್ಟವನ್ನು ಅಧಿಕಾರಿಗಳು ಮತ್ತು ಅಧಿಕಾರದಲ್ಲಿರುವವರು ಆಲಿಸಬೇಕು ಎಂದು ಹೇಳಿದರು.

Related Posts

Leave a Reply

Your email address will not be published.