ಶ್ರೀನಿವಾಸ್ ವಿವಿಯಲ್ಲಿ ಇನ್ಫಾರ್ಮೇಶನ್ ಕಮ್ಯುನಿಕೇಷನ್ & ಕಮ್ಪ್ಯೂಟೇಶನ್ ಟೆಕ್ನಾಲಜಿ, ದಿ ಪಿಲ್ಲರ್ ಫಾರ್ ಟ್ರಾನ್ಸ್ಫಾರ್ಮೇಷನ್ ಪುಸ್ತಕ ಬಿಡುಗಡೆ

ಇನ್ಫಾರ್ಮೇಶನ್ ಸೈನ್ಸ್ ಮತ್ತು ಟೆಕ್ನಾಲಜಿ ಸೀರೀಸ್ ನ ಇನ್ಫಾರ್ಮೇಶನ್ ಕಮ್ಯುನಿಕೇಷನ್ & ಕಮ್ಪ್ಯೂಟೇಶನ್ ಟೆಕ್ನಾಲಜಿ, ದಿ ಪಿಲ್ಲರ್ ಫಾರ್ ಟ್ರಾನ್ಸ್ಫಾರ್ಮೇಷನ್ ಎಂಬ ಪುಸ್ತಕದ ಬಿಡುಗಡೆಯ ವರ್ಚುವಲ್ ವೇದಿಕೆಯ ಮುಖಾಂತರ ನಡೆಯಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಷಿಯಲ್ ಸೈನ್ಸ್ & ಹ್ಯುಮ್ಯಾನಿಟೀಸ್ ನ ವತಿಯಿಂದ ನಡೆದ ವಿಜ್ಞಾನ, ಸಾಮಾಜಿಕ ವಿಜ್ಞಾನ, ನಿರ್ವಹಣೆ, ಮಾಹಿತಿ ವಿಜ್ಞಾನ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ’ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ: ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ನಡೆದ ಆನ್ ಲೈನ್ ವರ್ಚುವಲ್ ಸಮ್ಮೇಳನದಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ನವೀನ ಕಾರ್ಯಕ್ರಮ ಮತ್ತು ಸಂಶೋಧನಾ ಯೋಜನೆಯ ಮುಖ್ಯ ಸಲಹೆಗಾರ ಡಾ. ಪಿ. ಕೆ. ಪೌಲ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್, ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ & ಇನ್ಫಾರ್ಮೆಷನ್ ಸೈನ್ಸ್ ನ ಡೀನ್ ಪ್ರೊ. ಸುಬ್ರಹ್ಮಣ್ಯ ಭಟ್, ಸಹಾಯಕ ಪ್ರಾಧ್ಯಾಪಕ ಡಾ ಕೃಷ್ಣ ಪ್ರಸಾದ್ ಕೆ ಇವರು ಸಂಪಾದಿಸಿದ ಇನ್ಫಾರ್ಮೇಶನ್ ಕಮ್ಯುನಿಕೇಷನ್ & ಕಮ್ಪ್ಯೂಟೇಶನ್ ಟೆಕ್ನಾಲಜಿ, ದಿ ಪಿಲ್ಲರ್ ಫಾರ್ ಟ್ರಾನ್ಸ್ಫಾರ್ಮೇಷನ್ ಎಂಬ ಪುಸ್ತಕದ ಬಿಡುಗಡೆಯ ವರ್ಚುವಲ್ ವೇದಿಕೆಯ ಮುಖಾಂತರ ನಡೆಯಿತು.

 

Related Posts

Leave a Reply

Your email address will not be published.