ಶ್ರೀನಿವಾಸ್ ವಿವಿ ಕಾಲೇಜ್ ಆಫ್ ಫಿಸಿಯೋಥೆರಪಿ:ಫಿಸಿಯೋಥೆರಪಿ ವಿದ್ಯಾರ್ಥಿಗಳ ಫ್ರೆಶರ್‍ಸ್ ಫೈರ್ ಕಾರ್ಯಕ್ರಮ

ಶ್ರೀನಿವಾಸ್ ಯುನಿವರ್ಸಿಟಿಯ ಕಾಲೇಜ್ ಆಫ್ ಫಿಸಿಯೋಥೆರಫಿ ವಿಭಾಗದ ವತಿಯಿಂದ 2021-22ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರೆಶರ್‍ಸ್ ಪೈರ್ ಕಾರ್ಯಕ್ರಮವು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ಅವರ ಸಮ್ಮುಖದೊಂದಿಗೆ ಫಿಸಿಯೋಥೆರಫಿ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.


ಇದೇ ವೇಳೆ ಮಾತನಾಡಿದ ಶ್ರೀನಿವಾಸ್ ವಿವಿಯ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ಅವರು, ಫಿಸಿಯೋಥೆರಫಿ ವೈದ್ಯಕೀಯ ಶಾಸ್ತ್ರದ ವಿಶೇಷ ವಿಭಾಗವಾಗಿದ್ದುಮ ಇದೊಂದು ಔಷಧಿ ರಹಿತ ಚಿಕಿತ್ಸೆಯಾಗಿದೆ. ಅಂಗಾಂಗಗಳಿಗೆ ಪುನಶ್ಚೇತನ ನೀಡುವ ಸಂಜೀವಿನಿ ವಿದ್ಯೆಯಾಗಿದೆ. ಹೊಸ ಪದ್ಧತಿಗಳು ಮತ್ತು ಸುಧಾರಿತ ವೈದ್ಯಕೀಯ ಸಾಧನಗಳು ಪಿಸಿಯೋಥೆರಫಿಯನ್ನು ಜನಪ್ರಿಯಗೊಳಿಸುತ್ತದೆ ಎಂದು ಹೇಳಿದರು.


ಆನಂತರ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ಮಾತನಾಡಿ, ಕೋವಿಡ್ ಲಾಕ್‌ಡೌನ್ ಬಳಿಕ ಇದೀಗ ಶೈಕ್ಷಣಿಕ ಕ್ಷೇತ್ರಗಳು ತೆರೆದುಕೊಂಡಿವೆ. ವಿವಿಧ ರಾಜ್ಯಗಳಿಂದ ವ್ಯಾಸಂಗಕ್ಕೆ ಬಂದಿದ್ದೀರಿ, ಪಿಯುಸಿಯ ಬಳಿಕ ಮುಂದೇ ಎನು ಎಂಬ ಬಗ್ಗೆ ಯೋಚನೆ ಮಾಡುವವರಿಗೆ ಪಿಸಿಯೋಥೆರಪಿ ನಿಮ್ಮ ಒಂದು ಬಹುಮುಖ್ಯ ಆಯ್ಕೆಯಾಗಿದೆ ಎಂದು ಹೇಳಿದರು.


ಶ್ರೀನಿವಾಸ್ ಗ್ರೂಫ್ ಆಫ್ ಕಾಲೇಜಿನ ನಿರ್ದೇಶಕರಾದ ವಿಜಯಲಕ್ಷ್ಮೀ ಆರ್ ಅವರು ಮಾತನಾಡಿ, ನಾಲ್ಕು ವರ್ಷ ಉತ್ತಮವಾಗಿ ಕಲಿತು ನಮ್ಮ ಕಾಲೇಜಿನ ಉನ್ನತ ವಿದ್ಯಾರ್ಥಿಗಳಾಗಬೇಕು ಎಂದು ಹೇಳಿ ಶುಭಹಾರೈಸಿದರು.


ಶ್ರೀನಿವಾಸ್ ಯುನಿವರ್ಸಿಟಿಯ ಕುಲಪತಿ ಡಾ. ಪಿ.ಎಸ್. ಐತಾಳ್ ಅವರು ಮಾತನಾಡಿ, ಉತ್ತಮ ಕೋರ್ಸನ್ನು ಆಯ್ಕೆಮಾಡಿಕೊಂಡಿದ್ದೀರಿ, ಶ್ರೀನಿವಾಸ್ ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದದವರಿದ್ದು, ಪ್ರತಿಯೊಬ್ಬರು ಉತ್ತಮವಾಗಿ ವ್ಯಾಸಂಗವನ್ನು ಮಾಡಿ ಎಂದು ಹೇಳಿದರು.


ಈ ಸಂದರ್ಭದಲ್ಲಿ ಎ ಶಾಮರಾವ್ ಪೌಂಡೇಶನ್‌ನ ಸೆಕ್ರೆಟ್ರಿ ಡಾ. ಎ ಮಿತ್ರಾ ಎಸ್ ರಾವ್, ಡೀನ್ ಡಾ. ಎಸ್. ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.