ಮಾಜೀ ನಟ, ಹಾಲಿ ರಾಜಕಾರಣಿ | ವಿಜಯ್ ಹೆಂಡತಿ ಕೋರ್ಟಿಗೆ ಡೈವೋರ್ಸ್ಗೆ ಅರ್ಜಿ ಹಾಕಿದ ಪತ್ನಿ
ತಮಿಳಗ ವೆಟ್ರಿ ಕಳಗಂ ರಾಜಕೀಯ ಪಕ್ಷ ಸ್ಥಾಪಕ ನಟ ವಿಜಯ್ ಮಡದಿ ಸಂಗೀತಾ ಅವರು ಮದುವೆ ಮುರಿಗಡೆ ಕೋರಿ ಕೋರ್ಟು ಮೆಟ್ಟಿಲೇರಿದ್ದಾರೆ.
ದಲಿತ ಕ್ರಿಶ್ಚಿಯನ್ ನಟ ವಿಜಯ್ ಅವರು ಯಶಸ್ವೀ ತಮಿಳು ನಾಯಕ ನಟನಾಗಿ ಮೆರೆದವರು.

ಮೂರ್ನಾಲ್ಕು ತಿಂಗಳ ಹಿಂದೆ ಟಿವಿಕೆ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಇನ್ನೇನು ನಡೆಯಲಿರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಹು ಹಿಂದೆಯೇ ಸಂಗೀತಾ ಅವರು ನನ್ನ ಗಂಡ ನನ್ನನ್ನು ವಂಚಿಸುತ್ತಿದ್ದಾರೆ; ಹಲವು ನಟಿಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದರು.

೧೯೯೯ರ ಆಗಸ್ಟ್ ತಿಂಗಳಿನಲ್ಲಿ ನಟ ವಿಜಯ್ ಮತ್ತು ಸಂಗೀತಾ ಮದುವೆಯಾಗಿದ್ದರು. ಇಪ್ಪತ್ತೈದು ವರುಷಗಳ ದಾಂಪತ್ಯದ ಬಳಿಕ ಸಂಗೀತಾ ಸ್ವರ್ಣಲಿಂಗಂ ಗಂಡನಿಂದ ಬಿಡುಗಡೆ ಬಯಸಿದ್ದಾರೆ. ಚೆಂಗಲ್ಪಟ್ಟು ಜಿಲ್ಲಾ ಕೋರ್ಟಿನಲ್ಲಿ ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.

ಜೋಸೆಫ್ ವಿಜಯ್ ಚಂದ್ರಶೇಖರ್ ಅವರಿಂದ ಮುರಿಗಡೆಗೆ ಭಾರತದ 1954 ರ ಮದುವೆ ಕಾಯ್ದೆಯ ಕೆಲವು ವಿಧಿಗಳಡಿ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ಮದುವೆ ಸಮಾರಂಭಕ್ಕೆ ಮೊದಲು ವಿಜಯ್- ಸಂಗೀತಾ ಲಂಡನ್ನಿನಲ್ಲಿ ನೋಂದಣಿ ಮದುವೆ ಆಗಿದ್ದರು.

ಮೊಕದ್ದಮೆ ಅಂತ್ಯ ಕಾಣುವವರೆಗೆ ಚೆನ್ನೈನ ಕಾಸುರಿನಾ ಡ್ರೈವ್ ಮನೆಯಲ್ಲೇ ಉಳಿಯಲು ಮಧ್ಯಂತರ ಕಟ್ಟಳೆ ಇಡುವಂತೆ ಹಾಗೂ ಸೂಕ್ತ ಜೀವನಾಂಶಕ್ಕೆ ಸಂಗೀತಾ ಕೇಳಿಕೊಂಡಿದ್ದಾರೆ. ಜಾಸೊನ್ ಸಂಜಯ್, ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳು ಈ ದಂಪತಿಗೆ ಇದ್ದಾರೆ.



















