ದಕ್ಷಿಣ ಅಮೆರಿಕದ ಪಡುವಣ ಕರಾವಳಿ ಮೂಲದ ಒಟ್ಟಾರೆ ತೆಂಕಣ ಮಧ್ಯ ಅಮೆರಿಕದ ಟೊಮ್ಯಾಟೊವನ್ನು ಯೂರೋಪಿಗೆ, ಆ ಮೂಲಕ ಜಾಗತಿಕವಾಗಿಸಿದವರು ಸ್ಪಾನಿಶರು.

ಈಗಲೂ ವರುಷಕ್ಕೊಮ್ಮೆ ಹತ್ತಾರು ಲಾರಿ ಟೊಮ್ಯಾಟೊ ಸುರಿದು ಎಸೆದಾಡುವ, ಅದರಲ್ಲಿ ಉರುಳಾಡುವ ಹಬ್ಬ ಸ್ಪೆಯಿನ್‌ನಲ್ಲಿ ನಡೆಯುತ್ತದೆ. ಆದರೆ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ದೇಶ ಅದೂ ಅಲ್ಲ, ಅಮೆರಿಕದ ದೇಶಗಳೂ ಅಲ್ಲ.

ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಒಂದನೆಯ ಹಾಗೂ ಎರಡನೆಯ ಸ್ಥಾನದ ದೇಶಗಳು ಎಂದರೆ ಚೀನಾ ಮತ್ತು ಭಾರತ.

ಒಟ್ಟು ಜಾಗತಿಕ ಟೊಮ್ಯಾಟೊ ಉತ್ಪಾದನೆ 18.62 ಕೋಟಿ ಟನ್ ಇದೆ. ಅದರಲ್ಲಿ 36 ಶೇಕಡಾ ಚೀನಾದಲ್ಲಿ ಚೀನಾ ಬೆಳೆಯುವುದಾಗಿದೆ. ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಅಗ್ರ ದೇಶಗಳು ಹಾಗೂ ಬೆಳೆ ಪ್ರಮಾಣ ಮುಂದಿನಂತಿದೆ.

ಚೀನಾ 6.9 ಕೋಟಿ ಟನ್, ಭಾರತ 2.1 ಕೋಟಿ ಟನ್, ಟರ್ಕಿ 1.3 ಕೋಟಿ ಟನ್, ಯುಎಸ್‌ಎ 1 ಕೋಟಿ ಟನ್, ಈಜಿಪ್ತ್ 62.8 ಲಕ್ಷ ಟನ್, ಇಟೆಲಿ 61.4 ಲಕ್ಷ ಟನ್, ಮೆಕ್ಸಿಕೋ 42.1 ಲಕ್ಷ ಟನ್, ಬ್ರೆಜಿಲ್ 38.1 ಲಕ್ಷ ಟನ್, ನೈಜೀರಿಯಾ 36.9 ಲಕ್ಷ ಟನ್, ಸ್ಪೆಯಿನ್ 36.5 ಲಕ್ಷ ಟನ್. ಅಧಿಕೃತವಾಗಿ ಒಟ್ಟು 168 ದೇಶಗಳಲ್ಲಿ ಟೊಮ್ಯಾಟೊ ಬೆಳೆಸುತ್ತಾರೆ. ಬಹುತೇಕ ಸ್ವಂತ ಬಳಕೆಗೆ.

