HomeFresh Newsಹಂಗೆರಿಯ ಮೂರನೆಯ ಅತಿ ದೊಡ್ಡ ಸರೋವರ | ಸತತ ಮಳೆ ಕೊರತೆಗೆ ಸಿಕ್ಕಿರುವ ಸರೋವರ |...

ಹಂಗೆರಿಯ ಮೂರನೆಯ ಅತಿ ದೊಡ್ಡ ಸರೋವರ | ಸತತ ಮಳೆ ಕೊರತೆಗೆ ಸಿಕ್ಕಿರುವ ಸರೋವರ | ಸಾಯುತ್ತಿರುವ ಸರೋವರದ ಗೋಳು

160 ಮೀಟರ್ ಆಳ ನೀರಿದ್ದ 26 ಚಕಿಮೀ ದೊಡ್ಡದಾದ ಲೇಕ್ ವೆಲೆನ್ಸ್‌ನಲ್ಲಿ ಈಗ ಸರಾಸರಿ 10ಸೆಂಟಿಮೀಟರ್ ಮಾತ್ರ ನೀರು ಇದೆ.

ಹಂಗೆರಿಯ ರಾಜಧಾನಿ ಬುಡಾಪೆಸ್ಟ್‌ನಿಂದ 40 ಕಿಲೋಮೀಟರ್ ದೂರದ ವೆಲೆನ್ಸ್ ಸರೋವರವು ಮಳೆ ಕೊರತೆ ಮತ್ತು ನೀರಿನ ಕೆಟ್ಟ ನಿರ್ವಹಣೆಯ ಕಾರಣಕ್ಕೆ ಸಾಯುತ್ತಿದೆ.

ಗರಿಷ್ಟ 10.8 ಕಿಮೀ ಉದ್ದ, ಗರಿಷ್ಟ 3.3 ಕಿಮೀ ಅಗಲದ ಹಂಗೆರಿಯ ಮೂರನೆಯ ಅತಿ ದೊಡ್ಡ ಸರೋವರ ಸದ್ಯ ಸಾವು ಕಾಣುತ್ತಿದೆ.

ಗಾರ್ಡೋನಿ ನಗರದ ಮೇಯರ್ ಪಾಲ್ ಆರ್ಪಾಡ್ ಪ್ರಕಾರ ಅವರ ನಗರದ ಬಳಿ ದಡದಲ್ಲಿ ಬರೇ ಹೊಯಿಗೆಯಿದೆ, ನೀರಿನ ಆಳ ಬರೀ 10 ಸೆಂಟಿಮೀಟರ್ ಇದೆ.

ಬೇಸಿಗೆಯಲ್ಲಿ ಪ್ರವಾಸಿಗರು ಬೋಟಿಂಗ್ ಹಾಗೂ ಈಜಲು ಬರುವ ಅಗಾರ್ಡ್ ನಗರದ ಬಳಿ ಜೂನ್ 9 ರಂದು 56 ಸೆಂಟಿಮೀಟರ್ ಮಾತ್ರ ನೀರು ಇದೆ.

ಕಡು ಬೇಸಿಗೆ ಇಲ್ಲಿ ಜೂನ್, ಜುಲಾಯಿಯಲ್ಲಿ ಇರುತ್ತದೆ. ಈ ಸರೋವರದ ನೀರನ್ನು ಕೃಷಿಗೆ ಬಳಸುವವರು, ಕುಡಿಯಲು ಬಳಸುವವರು ಯಾವುದೇ ಸಮರ್ಪಕ ನೀರು ನಿರ್ವಹಣೆ ಅನುಸರಿಸುತ್ತಿಲ್ಲ ಎನ್ನಲಾಗಿದೆ.

Sudha 3
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments