ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಆರಂಭವಾಗಿರುವ ಕೂಟದಲ್ಲಿ ಭಾರತವು ಪದಕದ ಖಾತೆ ತೆರೆದಿದೆ.
ಪೋಲಿಯೊ ಪೀಡಿತ 28 ವರ್ಷದ ಝಂಡು ಕುಮಾರ್ ಅವರು ಮೊದಲ ಪ್ರಯತ್ನದಲ್ಲಿ 181 ಕೆ.ಜಿ. ಎರಡನೇ ಪ್ರಯತ್ನದಲ್ಲಿ 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 196 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಒಟ್ಟು 130.9 ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದರು.ನೈಜೀರಿಯಾದ ಇಡ್ರಿಸ್ ರಿಲುವಾನ್ 132.8 ಪಾಯಿಂಟ್ಗಳೊಂದಿಗೆ ಚಿನ್ನ, ಬ್ರಿಟನ್ನ ಮ್ಯಾಥ್ಯೂ ಹಾರ್ಡಿಂಗ್ 131 ಪಾಯಿಂಟ್ ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಕ್ರೀಡಾಪಟು ಸುಧೀರ್ ಅವರು 114.1 ಪಾಯಿಂಟ್ಗಳೊಂದಿಗೆ ಆರನೇ ಸ್ಥಾನ ಪಡೆದರು.
ಕ್ರೀಡಾಕೂಟದ ಮೊದಲ ದಿನ ಪ್ಯಾರಾ ಪವರ್ಲಿಫ್ಟರ್ ಅಶೋಕ್ ಮಲಿಕ್ ಅವರು ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಕೈತಪ್ಪಿತು.


