ಪುತ್ತೂರಿನ ಅಲ್ಪಸಂಖ್ಯಾತ ಸೇವಾ ಕೇಂದ್ರವಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ಬಾಲಕರ ವಸತಿ ನಿಲಯವಾಗಿ ಪರಿವರ್ತಿಸುವ ಪ್ರಸ್ತಾವನೆಯನ್ನು ಕೈಬಿಟ್ಟು ಮೂಲ ಉದ್ದೇಶದಲ್ಲಿಯೇ ಉಳಿಸಿ ಕಾರ್ಯಗತಗೊಳಿಸುವಂತೆ ಆಗ್ರಹಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ವತಿಯಿಂದ ಮನವಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪುತ್ತೂರು ನಗರ ಸಮಿತಿ ಇದರ ವತಿಯಿಂದ ಪುತ್ತೂರಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರದ ಕಟ್ಟಡವು ಪ್ರಸ್ತುತ ಸಮರ್ಪಕವಾಗಿ ಬಳಕೆಯಾಗದೆ ಈ ಕಟ್ಟಡವನ್ನು ಬಾಲಕರ ವಸತಿ ನಿಲಯವಾಗಿ ಪರಿವರ್ತಿಸುವ ಪ್ರಸ್ತಾವನೆಯಲ್ಲಿದೆ.ಅದನ್ನು ಮರುಪರಿಶೀಲಿಸಿ, ಕಟ್ಟಡವನ್ನು ಅದರ ಮೂಲ ಉದ್ದೇಶವಾದ ಅಲ್ಪಸಂಖ್ಯಾತರ ಕಲ್ಯಾಣ ಸೇವೆಗಳಿಗಾಗಿ ಉಳಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ನಗರ ಅಧ್ಯಕ್ಷ ತಾಜುದ್ದೀನ್ ಸಾಲ್ಮರ, ಕಾರ್ಯದರ್ಶಿ ಇಫಾಝ್ ಬನ್ನೂರು, ಜೊತೆ ಕಾರ್ಯದರ್ಶಿ ಪವಾಝ್ ಬನ್ನೂರು, ಸಮಿತಿ ಸದಸ್ಯ ಅಲಿ ಸಾಲ್ಮರ,ಲತೀಫ್ ಸಾಲ್ಮರ, ಉಮ್ಮರ್ ಸಾಲ್ಮರ, ಇಶಾನ್ ಗೋಳಿಕಟ್ಟೆ ಉಪಸ್ಥಿತರಿದ್ದರು.


