ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಕೃಷ್ಣ ವೇಷ ಹಾಗೂ ಯಶೋಧ ಕೃಷ್ಣ ಸ್ಪರ್ಧೆಯು ಆಗಸ್ಟ್ 30, 2026ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿ ಆವರಣದಲ್ಲಿ ನಡೆಯಲಿದೆ.

ಸ್ಪರ್ಧೆಯು ಒಟ್ಟು ಮೂರು ವಿಭಾಗಗಳಲ್ಲಿ ನಡೆಯಲಿದ್ದು, ವಿವರಗಳು ಕೆಳಗಿನಂತಿವೆ:
ವಿಭಾಗಗಳು:
- ವಿಭಾಗ 1: 1 ರಿಂದ 3 ವರ್ಷದೊಳಗಿನ ಮಕ್ಕಳಿಗೆ (ಕೃಷ್ಣ ವೇಷ)
- ವಿಭಾಗ 2: 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ (ಕೃಷ್ಣ ವೇಷ)
- ವಿಭಾಗ 3: 1 ರಿಂದ 6 ವರ್ಷದೊಳಗಿನ ಮಕ್ಕಳ ಅಮ್ಮಂದಿರಿಗೆ (ಯಶೋಧ ಕೃಷ್ಣ ಸ್ಪರ್ಧೆ)
ಬಹುಮಾನದ ವಿವರಗಳು (ಪ್ರತಿ ವಿಭಾಗಕ್ಕೂ ಪ್ರತ್ಯೇಕ): - ಪ್ರಥಮ ಬಹುಮಾನ: ₹3,000
- ದ್ವಿತೀಯ ಬಹುಮಾನ: ₹2,000
- ತೃತೀಯ ಬಹುಮಾನ: ₹1,000
- ಭಾಗವಹಿಸಿದ ಎಲ್ಲಾ ಮುದ್ದು ಮಕ್ಕಳಿಗೆ ಹಾಗೂ ಯಶೋಧ ಕೃಷ್ಣರಿಗೆ ನೆನಪಿನ ಕಾಣಿಕೆಯಾಗಿ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು.
ನಿಯಮಗಳು ಮತ್ತು ನಿಬಂಧನೆಗಳು: - ಸ್ಪರ್ಧೆಗೆ ಆಗಮಿಸುವ ಸಂದರ್ಭದಲ್ಲಿ ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಒಂದು ಭಾವಚಿತ್ರವನ್ನು ಕಡ್ಡಾಯವಾಗಿ ತರತಕ್ಕದ್ದು.
- ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ಆಗಸ್ಟ್ 28, 2026 ರ ಒಳಗಾಗಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾವಣಿಗಾಗಿ ಸಂಪರ್ಕಿಸಿ:
ಫೋನ್ ಸಂಖ್ಯೆ: 8590773486


