HomeFresh Newsಪುತ್ತೂರಿನಲ್ಲಿ ಹಡಿಲು ಗದ್ದೆಯ ಬೇಸಾಯ: ಶಾಸಕ ಸಂಜೀವ ಮಠಂದೂರು ಚಾಲನೆ

ಪುತ್ತೂರಿನಲ್ಲಿ ಹಡಿಲು ಗದ್ದೆಯ ಬೇಸಾಯ: ಶಾಸಕ ಸಂಜೀವ ಮಠಂದೂರು ಚಾಲನೆ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ವಿನೂತನ ಯೋಜನೆಯ ಅಂಗವಾಗಿ ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಕುರಿಯ ನೇತೃತ್ವದಲ್ಲಿ ಹಡಿಲು ಗದ್ದೆಯನ್ನು ಬೇಸಾಯ ಮಾಡಬೇಕು ಎನ್ನುವ ಕೋರಿಕೆಯ ಮೇರೆಗೆ ಕುರಿಯ ಗ್ರಾಮದ ಮುಳಿಯ ಶ್ಯಾಮ ಭಟ್ ಅವರ ಕುಟುಂಬದ ಗದ್ದೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಕೃಷಿ ಆಂದೋಲನಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷರಾದ ಶ್ರೀ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಶ್ರೀ ರಾಮದಾಸ್, ಶ್ರೀ ರಾಮಚಂದ್ರ ಕಾಮತ್, ಶ್ರೀ ರವೀಂದ್ರನಾಥ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಬೂಡಿಯಾರ್ ರಾಧಾಕೃಷ್ಣ ರೈ ಹಾಗೂ ಮುಳಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments