Home Blog Full Width

ಕೊಹ್ಲಿ ನಂತರ ಯಾರು?; ರಾಹುಲ್ ಗೆ ಸಿಗುತ್ತಾ ಟೆಸ್ಟ್ ಕ್ಯಾಪ್ಟನ್‌ಶಿಪ್?

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಸೋಲುತ್ತಿದ್ದಂತೆ ಟೆಸ್ಟ್ ನಾಯಕತ್ವ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನಂತರ ಯಾರು? ಯಾರಿಗೆ ಟೆಸ್ಟ್ ನಾಯಕತ್ವವೆಂಬುದು ಪ್ರಸ್ತುತ ಚರ್ಚೆಯಾಗುತ್ತಿರುವ ವಿಚಾರ. ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಗೆ ನಾಯಕತ್ವ ಒಲಿದು ಬರಬಹುದೇ ಎಂಬ ನಿರೀಕ್ಷೆ ಹಾಗೂ ಕಾತುರದಲ್ಲಿ

ರಾಜ್ಯದ 4 ಕ್ಲಸ್ಟರ್‌ಗಳಲ್ಲಿ ಐಟಿ ಕ್ಷೇತ್ರ ವಿಸ್ತರಣೆ..! ತೆರೆಕೊಳ್ಳುತ್ತಾ ಸ್ಥಳೀಯರಿಗೆ ಉದ್ಯೋಗ?

ರಾಜ್ಯ ರಾಜಧಾನಿ ಬೆಂಗಳೂರು ದೇಶದ ಪ್ರಮುಖ ವಾಣಿಜ್ಯ ನಗರಿಗಳಲ್ಲಿ ಒಂದು. 2000 ಹಾಗೂ ನಂತರದ 22 ವರ್ಷಗಳ ನಡುವಿನ ಅವಧಿ ಬೆಂಗಳೂರು ನಗರಕ್ಕೆ ಅಭಿವೃದ್ಧಿಯ ಪರ್ವ. ಇಲ್ಲಿನ ಐಟಿ-ಬಿಟಿ ಕ್ಷೇತ್ರಗಳಲ್ಲಾದ ಹೂಡಿಕೆ ಹಾಗೂ ಸಾವಿರಾರು ಕಂಪನಿಗಳ ಸ್ಥಾಪನೆಯಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ದೇಶದ ಪ್ರಮುಖ ಐಟಿ-ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದೇಶದ ಐಟಿ ರಫ್ತಿಗೆ ಬೆಂಗಳೂರಿನ ಕೊಡುಗೆ ಶೇ.38 ರಷ್ಟಿದೆ. ದೇಶದ ಪ್ರಮುಖ

ಚುನಾವಣೆ ತಂತ್ರಗಾರಿಕೆ ಮತ್ತು ಪಾದಯಾತ್ರೆ ರಾಜಕೀಯ

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನಾಯಕರ ಬಳ್ಳಾರಿ ಚಲೋ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿಯನ್ನು ಬರೆದಿದ್ದು ಇತಿಹಾಸ. ಇದೀಗ, ಮುಂಬರುವ ವಿಧಾನ ಸಭೆ ಚುನಾವಣೆ ಮಾರ್ಗಸೂಚಿಯಾಗುವ ಹುರುಪಿನೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿತ್ತು. ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದ್ದ ಕಾರಣಗಳಿಂದ ಪಾದಯಾತ್ರೆ ಜ.೧೩ ರಂದು ಐದನೇ

ನಂದಿನಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ನಿರ್ಧಾರ

ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ, ಜನರು ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಹಣವನ್ನು ವ್ಯಯಿಸಲು ಸಿದ್ದರಾಗಬೇಕಾದ ಸಂದರ್ಭ ಎದುರಾಗಿದೆ. ಹಾಲು ಸೇರಿದಂತೆ ಡೈರಿ ಉತ್ಪನಗಳ ಬೆಲೆ ಏರಿಕೆಗೆ ಹಾಲು ಉತ್ಪಾದಕ ಒಕ್ಕೂಟಗಳು ಬೇಡಿಕೆ ಇಟ್ಟಿದ್ದಾರೆ. ಸರ್ಕಾರವು ಬೆಲೆ ಏರಿಕೆಗೆ ಒಪ್ಪಿಗೆ ನೀಡಿದರೆ ಪ್ಯಾಕೆಟ್‌ ಹಾಲಿನ ಬೆಲೆ ಮೂರು ರೂ. ಹೆಚ್ಚಾಗಲಿದೆ. ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ

ನಾರಾಯಣಗುರುವಿಗೆ ಕೇಂದ್ರ ಸರ್ಕಾರದಿಂದ ಅಪಮಾನ : ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪ

ಮೂಡುಬಿದಿರೆ: ಗಣರಾಜ್ಯೋತ್ಸವ ಪರೇಡ್ನಲ್ಲಿ ಕೇರಳ ಸರ್ಕಾರವು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಮುಂದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು ನಿರ್ಬಂಧ ಹೇರುವ ಮೂಲಕ ನಾರಾಯಣಗುರುಗಳಿಗೆ ಅಪಮಾನ ಮಾಡಿದೆ. ಹಿಂದುಳಿದ ವರ್ಗಗಳ ಮೇಲೆ ಕೇಂದ್ರ ಸರ್ಕಾರವು ಯಾವ ರೀತಿ ಪ್ರೀತಿ ತೋರಿಸುತ್ತಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು

ಉಡುಪಿ ಪಯಾರ್ಯ ಮಹೋತ್ಸವಕ್ಕೆ ಕ್ಷಣಗಣನೆ

ಉಡುಪಿ ಶ್ರೀ ಕೃಷ್ಣಾಪುರ ಮಠದಲ್ಲಿ ಪರ್ಯಾಯ ಮಹೋತವ 2022ಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 18ರ ಮಂಗಳವಾರದಿಂದ ಜ.22ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಲ್ಪಟ್ಟ ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ಜನಾರ್ದನ ತೀರ್ಥರ ಅವಿಚಿನ್ನ ಪರಂಪರೆಯ ಪರಮಪೂಜ್ಯ ಶ್ರೀ ವಿದ್ಯಾರತ್ನ ತೀರ್ಥ ಶ್ರೀಪಾದರ ಕರಕಮಲ ಸಂಜಾತರೂ ಶ್ರೀ ಮಠದ ಮೂವತ್ತನಾಲ್ಕನೇ ಉತ್ತರಾಧಿಕಾರಿಗಳೂ ಆಗಿರುವ ಪರಪಮೂಜ್ಯ

ದೇಶದ ಯಾವುದೇ ವ್ಯಕ್ತಿಗೆ ಬಲವಂತಾಗಿ ಲಸಿಕೆ ನೀಡುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

ದೇಶದ ಯಾವುದೇ ವ್ಯಕ್ತಿಗೆ ಅವರ ಒಪ್ಪಿಗೆ ಪಡೆಯದೆ ಬಲವಂತವಾಗಿ ಲಸಿಕೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ವಿಕಲಾಂಗ ಜನರ ಮನೆ-ಮನೆಗೆ ಹೋಗಿ, ಆದ್ಯತೆಯ ಕೊರೊನಾ ಲಸಿಕೆಯನ್ನು ಹಾಕಬೇಕು ಎಂದು ಕೋರಿ ಎನ್‌ಜಿಒ ಎವಾರಾ ಫೌಂಡೇಶನ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಒಕ್ಕೂಟ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವ್ಯಕ್ತಿಯ ಒಪ್ಪಿಗೆ ಪಡೆಯದೇ ಲಸಿಕೆ ನೀಡುವುದಿಲ್ಲ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವೀರಭದ್ರ ದೇವರ ಗುಡಿಯ ಶಿಲಾಮಯ ಮೂಹೂರ್ತ

 ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರವಿವಾರ ಬೆಳಿಗ್ಗೆ ವೀರಭದ್ರ ದೇವರ ಗುಡಿಯ ಶಿಲಾಮಯ ಮುಹೂರ್ತಕ್ಕೆ ಚಾಲನೆ ಸಿಕ್ಕತು. ಸುಮಾರು 2ಕೋಟಿಗೂ ಮೀರಿದ ಶಿಲಾಮಯ ದೇಗುಲಕ್ಕೆ ದಾನಿಗಳಾದ ಕೃಷ್ಣಮೂರ್ತಿ ಮಂಜರು ಹಾಗೂ ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ನೇತೃತ್ವದಲ್ಲಿ ಕೆಸರು ಕಲ್ಲು ಮುಹೂರ್ತ ನೆರವೇರಿತು. ಈ ದೇವತಾ ಕಾರ್ಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾಕ್ಟರ್ ಅತುಲ್

ಸೈನಿಕನಾಗಬೇಕು ಎಂಬ ಕನಸು ಹೊಂದಿದ್ದ ಶಿವಪ್ರಸಾದ್. ಕೆ ನಿಧನ

ಬಂಟ್ವಾಳ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಶಿವಪ್ರಸಾದ್. ಕೆ (23) ನಿನ್ನೆ ನಿಧನರಾಗಿದ್ದಾರೆ ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಸ್ಯದ ಮೂಲಕ ಜನರ ಮನಸ್ಸು ಗೆದ್ದಿದ್ದ ಶಿವಪ್ರಸಾದ್ಅಪ್ಪಟ ದೇಶಪ್ರೇಮಿಯಾಗಿದ್ದರು. ಬಾಲ್ಯದಿಂದಲೇ ಸೈನಿಕನಾಗಬೇಕು ಎಂಬ ಕನಸು ಹೊಂದಿದ್ದರು. ಇದಕ್ಕಾಗಿ ಜಿಮ್ ಮತ್ತು ಇತರ ವ್ಯಾಯಾಮ ದಲ್ಲಿ ಸದಾ ತೊಡಗಿಸಿಕೊಂಡಿದ್ದ
How Can We Help You?