ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಕಚೇರಿಯಲ್ಲಿ ಶಹೀದ್ ಭಗತ್ ಸಿಂಗ್ ಹುತಾತ್ಮ ದಿನದ ಸ್ಮರಣೆ ಕಾರ್ಯಕ್ರಮ ನಡೆಯಿತು.ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಆಸೀಫ್ ಬಾವ ಉರುಮನೆ, ಶ್ರೀಧರ್, ನೌಷಾದ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ, ರಹಿಮಾನ್
ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಸ್ಪರ್ಧಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕ – ರಾಜ್ಯ ಸಂಚಾಲಕ ಮತ್ತು ಜಿಲ್ಲಾಧ್ಯಕ್ಷ – ಆದಿತ್ಯ ಕೊಲ್ಲಾಜೆ ಮತ್ತು ಅವರ ತಂಡ ಬಜಿರೆ, ಗ್ರಾಮಕ್ಕೆ ಸಹಿ ಅಭಿಯಾನ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ನಡೆಸಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಕಳೆದ 5 ವರ್ಷಗಳಿಂದ ಹಲವೆಡೆ ನೀರಿಲ್ಲದೆ, ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಇದಲ್ಲದೇ, ಇಲ್ಲಿನ ಜನರು ಹಿಂದಿನ
ಸ್ವಾತಂತ್ರ್ಯ ಚಳುವಳಿಯ ಧ್ರುವತಾರೆಗಳಾದ ಶಹೀದ್ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಾದ ರಾಜ್ ಗುರು, ಸುಖದೇವ್ ಅವರು ಬ್ರಿಟಿಷರ ನೇಣುಗಂಬಕ್ಕೆ ನಗು ನಗುತ್ತಲೇ ಏರಿದ ಹುತಾತ್ಮರಾದ ಕ್ರಾಂತಿಕಾರಿಗಳ ಬಲಿದಾನವನ್ನು ನೆನಪಿಸಿ ಡಿವೈಎಫ್ಐ ಸುರತ್ಕಲ್ ಘಟಕದ ಆಶ್ರಯದಲ್ಲಿ ಕಾನ ಜಂಕ್ಷನ್ ಬಳಿ ಕ್ಯಾಂಡಲ್ ದೀಪ ಬೆಳಗಿ ಹುತಾತ್ಮರಾದ ಧೀರ ಸಂಗಾತಿಗಳಿಗೆ ಕೆಂಪು ವಂದನೆ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್
ಉಳ್ಳಾಲ: ರೈತರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ, ಬಡ ರೈತರ ಕುಮ್ಕಿ ಜಾಗದ ಹಕ್ಕನ್ನು ಒತ್ತಾಯಪೂರ್ವಕವಾಗಿ ಕಸಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ರೈತರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಪಡೆಯುವ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು. ಅವರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ
ಉಳ್ಳಾಲ: ಇಲ್ಲಿನ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ಕಂಬಳ ಕರೆಯ ಬಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮಾ. 25ರಂದು
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿನ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಿಂದ ಮೇಣದ ಬತ್ತಿ ತಯಾರಿಕಾ ಘಟಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಸುಮಾರು 25 ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಯಂತ್ರೋಪಕರಣಗಳು ಹಾಗೂ ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು
ವಿಟ್ಲ ತ್ರಿಕಾಲ ಪೂಜಾ ಸಮಿತಿ ವತಿಯಿಂದ ವಿಟ್ಲದ ಅರಮನೆಯಲ್ಲಿ ಏಪ್ರಿಲ್ 11 ರಂದು ನಡೆಯಲಿರುವ ತ್ರಿಕಾಲ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ವಿಟ್ಲ ಅರಮನೆಯಲ್ಲಿ ನಡೆಯಿತು. ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಏಪ್ರಿಲ್ 11 ರಂದು ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಮನೆತನದ ಅರಮನೆಯಲ್ಲಿ ಶ್ರೀದೇವಿಯ ಪ್ರೀತ್ಯರ್ಥವಾಗಿ ಸಮಸ್ತ ಸಮಾಜದ ಒಳಿತಿಗಾಗಿ ಅರಮನೆಯ ಮಠದಲ್ಲಿ ಶ್ರೀದೇವಿಗೆ ತ್ರಿಕಾಲ ಪೂಜೆ ನಡೆಯಲಿದೆ.
ಕಾಪು ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ತ್ಯಾಜ್ಯ ದ ದುರ್ನಾತ ಪರಿಸರವೆಲ್ಲಾ ಪಸರಿಸಿದ್ದು ಜನ ರೋಗ ಭೀತಿಯ ಆತಂಕದಲ್ಲಿದ್ದಾರೆ.ಮೇಲ್ನೋಟಕ್ಕೆ ವಿದ್ಯುತ್ ಅವಘಢದಿಂದ ಬೆಂಕಿ ಹತ್ತಿಕೊಂಡಿರ ಬಹುದೆಂದು ಅಂದಾಜಿಸಲಾಗುತ್ತಿದೆ ಯಾದರೂ. ಮಾರಿಪೂಜೆಯ ಹಿನ್ನಲೆಯಲ್ಲಿ ಬಾರೀ ತ್ಯಾಜ್ಯಗಳು ಶೇಖರಣೆ ಗೊಳ್ಳುವ ಆತಂಕವಿದ್ದು, ಉದ್ದೇಶ ಪೂರ್ವಕವಾಗಿಯೇ ಯಾರೋ ಬೆಂಕಿ ಹಾಕಿದ್ದಾರೆಂಬ ಸಂಶಯ ಜನ ವ್ಯಕ್ತ ಪಡಿಸುತ್ತಿದ್ದಾರೆ. ಬೆಂಕಿಯ
ಉಳ್ಳಾಲ: ವೈದ್ಯಕೀಯ ಕಾಲೇಜು ಜೊತೆಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಕೇರಳ ಗಡಿಭಾಗದ ನರಿಂಗಾನ ಗ್ರಾಮ ಸಾಕಷ್ಟು ಅಭಿವೃದ್ಧಿಯನ್ನು ಶಾಸಕರ ಮುತುವರ್ಜಿಯೊಂದಿಗೆ ನಡೆಯುತ್ತಿದ್ದು, ಶೀಘ್ರವೇ ತುಳು ಗ್ರಾಮ ಸ್ಥಾಪನೆಯೊಂದಿಗೆ ಇತಿಹಾಸದ ಪುಟಗಳಲ್ಲಿ ಗ್ರಾಮ ಅಚ್ಚಳಿಯದೆ ನೆಲೆ ನಿಲ್ಲಲಿದೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ. ಅವರು ನರಿಂಗಾನ ಗ್ರಾಮದ ನೆತ್ತಿಲಕೋಡಿ ರಸ್ತೆ ಕಾಂಕ್ರೀಟಿಕರಣದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಶಾಸಕರ
ಸಿಂದಗಿಯಲ್ಲಿ ದಿವಂಗತ ಶಿವಾನಂದ್ ಪಾಟೀಲ್ ಸೋಮಜಾಳ ಶ್ರದ್ದಂಜಲಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯೆಂದು ವಿಶಾಲಾಕ್ಷಿ ಶಿವಾನಂದ್ ಪಾಟೀಲ್ ಎಂದು ಘೋಷಣೆ ಮಾಡಿದ್ದು ಕೆಲವು ಜೆಡಿಎಸ್ ಕಾರ್ಯಕರ್ತರ ಅಸಮಾಧಾನ ಉಂಟಾಗಿದೆ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು. ಅವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ವಿಶಾಲಾಕ್ಷಿ ಶಿವಾನಂದ್ ಪಾಟೀಲ ಇವರು ಹಳೆ ಕಾರ್ಯಕರ್ತರನ್ನು