ಪಡುಬಿದ್ರಿಯ ಪುರಾತನ ದೇವಳಗಳಲ್ಲಿ ಒಂದಾದ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತಾದಿಗಳು ಶ್ರೀ ನಾಗದೇವರಿಗೆ ತನು ತಂಬಿಲ ಸೇವೆ ನೀಡಿದರು.
ಉಡುಪಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ನೆರಳಲ್ಲಿ ನಡೆಯುವ “ದುರ್ಗಾ ದೌಡ್ ” ಧಾರ್ಮಿಕ ಕಾರ್ಯಕ್ರಮಕ್ಕೆ ನಂದಿಕೂರು ಹಾಗೂ ಪಲಿಮಾರು ಘಟಕದಿಂದ ನೂರಾರು ಕಾರ್ಯಕರ್ತರು ನಂದಿಕೂರಿನಿಂದ ಬೈಕ್, ಕಾರು ಹಾಗೂ ಬಸ್ ಮೂಲಕ ತೆರಳಿದ್ದು ಅವರ ಜಾಥಕ್ಕೆ ಸ್ಥಳೀಯ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಉಡುಪಿಯಲ್ಲಿ ದುರ್ಗಾ ದೌಡ್ ಎಂಬ ಬೃಹತ್ ಸಮಾವೇಶ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಹಿಂದೂ ಜಾಗರಣ ವೇದಿಕೆಯ