ಹಲ್ಲಿನ ಬಣ್ಣ ಬದಲಾಗುವುದೇಕೆ? ಮುತ್ತಿನಂತೆ ಪಳಪಳ ಹೊಳೆಯುವ ಬಿಳುಪಾದ ಹಲ್ಲುಗಳು ಇರಬೇಕೆಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ಎಲ್ಲರ ಹಲ್ಲುಗಳ ಬಣ್ಣ ಬೇರೆ ಬೇರೆ ಇರುತ್ತದೆ. 90 ಶೇಕಡಾ ಮಂದಿಗೆ ಬಿಳಿಯಾದ ಹಲ್ಲುಗಳು ಇರುತ್ತವೆ. ಇನ್ನುಳಿದ 10 ಶೇಕಡಾ ಮಂದಿಗೆ ತೆಳು ಹಳದಿ, ಹಳದಿ, ಗುಲಾಬಿ ಬಣ್ಣ, ಕಪ್ಪಾಗಿರುವ ಹಲ್ಲು ಹೀಗೆ ಬೇರೆ ಬೇರೆ ಬಣ್ಣದ ಹಲ್ಲುಗಳು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಹಲ್ಲು ತಕ್ಷಣ ಬಿಳುಪಾಗಿಸಲು ಹಲವಾರು ಸುಲಭ ವಾಮ ಮಾರ್ಗಗಳನ್ನು ಯಾವುದೇ ವೈಜ್ಞಾನಿಕ ಪುರಾವೇ ಇಲ್ಲದೆ ಹತ್ತು ನಿಮಿಷಗಳಲ್ಲಿ ಹಲ್ಲು ಬಿಳಿಯಾಗುತ್ತದೆ ಎಂದೆಲ್ಲಾ ಜಾಹೀರಾತು ನೀಡಿ ದಾರಿ ತಪ್ಪಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹಾ ದಿಢೀರ್ ಬಿಳುಪೀಕರಣದಿಂದಾಗುವ ಅಪಾಯದ ಅರಿವು ಇಲ್ಲದ ಜನರು ಹಲ್ಲು ಬಿಳುಪಾಗಿಸಲು ಸುಲಭವಾದ ಅವೈಜ್ಞಾನಿಕವಾದ ದಾರಿ ಹಿಡಿದು ಹಲ್ಲನ್ನು ಹಾಳು ಮಾಡಿಕೊಂಡ ನಿದರ್ಶನಗಳು
ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಅದರಿಂದ ವ್ಯಕ್ತಿಯ ಮಾನಸಿಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ವಸಡಿನ ರೋಗಕ್ಕೆ ನಾಂದಿ ಹಾಡುತ್ತದೆ. ಹಲ್ಲಿನ ಸುತ್ತ ಪಾಚಿ