Home Posts tagged #V4 STREAM (Page 2)

ಕುಕ್ಕೆ ಸುಬ್ರಹ್ಮಣ್ಯ ಭಾರಿ ಮಳೆ ಹಿನ್ನೆಲೆ : ಕ್ಷೇತ್ರ ದರ್ಶನಕ್ಕೆ ನಿರ್ಬಂಧ

ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕನ್ನಡಿಗ ಗುರುರಾಜ ಪೂಜಾರಿಗೆ ಕಂಚು

ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕುಂದಾಪುರದ ವೇಟ್‍ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪುರುಷರ 61 ಕೆ.ಜಿ. ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಎರಡನೇ ಬಾರಿ ಭಾರತಕ್ಕೆ ಪದಕ

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಸಾಯಿಕೋಮ್ ಚಾನು 49 ಕೆಜಿ ಸ್ನಾಚ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಬಂಗಾರ ತಂದಿದ್ದಾರೆ

ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಹುಲಿ ದಿನಾಚರಣೆ

ದೇಶದಲ್ಲೇ ಕರ್ನಾಟಕದಲ್ಲಿರುವ ಹುಲಿಗಳ ಗಣತಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ, ರಾಜ್ಯದಲ್ಲೇ ಅತ್ಯಾಧಿಕ ಹುಲಿಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಸ್ತಾರಗೊಂಡಿದೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಬಳಿ ಇರುವ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ 12 ನೇ ವಿಶ್ವ ಹುಲಿ

ಮಾಡರ್ನ್ ಕಿಚನ್ ನ ಪಾಲುದಾರರಾಗಿರುವ ಅಣ್ಣಪ್ಪ ಪೈ(74) ನಿಧನ

ಖ್ಯಾತ ಸಂಸ್ಥೆ ಮಾಡರ್ನ್ ಕಿಚನ್ ಇದರ ಪಾಲುದಾರರಾಗಿರುವ ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಅಣ್ಣಪ್ಪ ಪೈ(74) ಅವರು ಬೆಂಗಳೂರಿನಲ್ಲಿ ಬುಧವಾರ ನಿಧನರಾದರು ಅವರು ಪತ್ನಿ ಇಬ್ಬರು ಪುತ್ರರಾದ ಒರೇಕಲ್ ಕಂಪನಿಯ ಅರವಿಂದ ಪೈ, ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ ಗುರುವಾರ ಮಧ್ಯಾಹ್ನ ಮಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ

ಟೋಲ್‌ಗೇಟ್ ಪಕ್ಕದಲ್ಲೆ ಬಸ್ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಮಂಜೇಶ್ವರ: ಕೇರಳ ಗಡಿ ಭಾಗದಿಂದ ಪ್ರಯಾಣಿಕರನ್ನು ಹೇರಿಕೊಂಡು ಆಗಮಿಸುತ್ತಿರುವ ಬಸ್ಸುಗಳು ಕೇರಳ ಕರ್ನಾಟಕದ ಗಡಿಯಲ್ಲಿರುವ ಕರ್ನಾಟಕದಲ್ಲಿ ಪ್ರಯಾಣಿಕರನ್ನು ಇಳಿಸಿ ಟೋಲ್ ಗೇಟ್ ಪಕ್ಕದಲ್ಲೇ ನಿಲುಗಡೆಯನ್ನು ನೀಡುವುದನ್ನು ಪ್ರತಿಭಟಿಸಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸ್ಥಳೀಯ ವ್ಯಾಪಾರಿಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ಖಾಸಗಿ ಬಸ್ಸುಗಳು ಕೊರೊನ ಲಾಕ್ ಡೌನ್ ಗಿಂತ ಮೊದಲು ಯಾವರೀತಿಯಲ್ಲಿ ಯಾವ ಸ್ಥಳಗಳಲ್ಲಿ ನಿಲುಗಡೆಯಾಗುತಿತ್ತೋ ಅದನ್ನೇ

ರೆ. ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡ್‌ನ್ ಲೋಕಾರ್ಪಣೆ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಮುಖಾಂತರ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ

ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಸರಣಿ ಕಳ್ಳತನ

ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ. ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ

ಕಡಬ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೆರೆಗೆ ಬಿದ್ದು ಮೃತ್ಯು

ವಿದ್ಯಾರ್ಥಿನಿಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನ.15ರಂದು ಬೆಳಿಗ್ಗೆ ನಡೆದಿದೆ. ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ, ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18ವ.)ಮೃತಪಟ್ಟ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ ಬೆಳಿಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ

ನಟ ಪುನೀತ್ ರಾಜ್‌ಕುಮಾರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಾಗಿದೆ.ಆರೋಗ್ಯದಲ್ಲಿ ಏರುಪೇರಾದ ಕಾರಣ ಪುನೀತ್ ರಾಜ್ ಕುಮಾರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪುನೀತ್ ರಾಜ್ ಕುಮರ್ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಟನಿಗೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪುನೀರ್ ರಾಜ್ ಕುಮಾರ್ ಅವರಿಗೆ ಇಸಿಜಿ