Home Posts tagged #v4news karnataka (Page 23)

ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ – ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಮುದ್ದಣ ಸಾಹಿತ್ಯೋತ್ಸವ – ೪೩ನೇ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ಭಾನುವಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ನಡೆಯಿತು.ಧರ್ಮದರ್ಶಿ ಹರಿಕೃಷ್ಣ ಪುನರೂರು ಆಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲ, ಕಲಾವಿದ ಪ್ರೊ| ಎಂ.ಎಲ್.

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘ (ಕೆಎಲ್‌ಎಸ್) ಕೊಂಕಿಣಿ ಸಾಹಿತ್ಯ ಪ್ರಶಸ್ತಿ-೨೦೨೩ ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ. ೨೫ರ ಶನಿವಾರದಂದು ನಂತೂರು ಬಜ್ಜೋಡಿ ಸಂದೇಶ ಪ್ರತಿಷ್ಠಾನದ ಸಂದೇಶದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ’ರಾಕ್ಣೊ’ ವಾರಪತ್ರಿಕೆಯ ಮಾಜಿ ಸಂಪಾದಕ ರೆ| ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರಕಾರಿ ಕಾಲೇಜು ಪ್ರೊ. ರಾಧಾಕೃಷ್ಣ ಬೆಳ್ಳೂರು

ಬಾಲ ನಟಿ ದೀಕ್ಷಾ ಡಿ ರೈ ಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ..!

ಪೆನ್ಸಿಲ್ ಬಾಕ್ಸ್. ಹಸೆರೇ ಹೇಳುವಂತೆ ಇದು ಮಕ್ಕಳ ಕನ್ನಡ ಸಿನಿಮಾ. ಬಹುತೇಕ ಕರಾವಳಿ ಪ್ರತಿಭೆಗಳೇ ಸೇರಿ ಮಾಡಿರುವ ಮೂವಿ. ದೃಶ್ಯ ಮೂವೀಸ್ ಬ್ಯಾನರಿನಡಿಯಲ್ಲಿ ಉದ್ಯಮಿ ದಯಾನಂದ ಎಸ್ ರೈ ಅವರ ನಿರ್ಮಾಣದಲ್ಲಿ ತಯಾರಾದ ಮಕ್ಕಳ ಕಥಾನಕವನ್ನೊಳಗೊಂಡ ಸದಭಿರುಚಿಯ ಮನರಂಜನೆಯ ‘ಪೆನ್ಸಿಲ್ ಬಾಕ್ಸ್’ ಚಿತ್ರ ಕರಾವಳಿಯಾದ್ಯಂತ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿ ಹಿಟ್ ಆಗಿತ್ತು. ಇದೀಗ ಚಿತ್ರದ ಬಾಲ ನಟಿ ದೀಕ್ಷಾ ಡಿ ರೈಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ

ಮಂಜೇಶ್ವರ : ಕಸದ ತೊಟ್ಟಿಯಾಗಿ ದುರ್ನಾತ ಬೀರುತ್ತಿರುವ ಪುರಾತನ ಬಾವಿ

ಮಂಜೇಶ್ವರ : ಮಂಜೇಶ್ವರ ಗ್ರಾ.ಪಂ. ನ 17ನೇ ವಾರ್ಡು ವ್ಯಾಪ್ತಿಯಲ್ಲಿರುವ ಪುರಾತನ ಬಾವಿಯೊಂದು ಈಗ ಕಸದ ತೊಟ್ಟಿಯಾಗಿ ದುರ್ನಾತ ಬೀರುತ್ತಿದ್ದು ಅವಸಾನದ ಅಂಚಿಗೆ ತಲುಪಿದ್ದರೂ ಈ ಬಾವಿಯ ನೀರನ್ನು ಸಮೀಪದ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ, ಪಾನಿಪುರಿ ಸ್ಟಾಲ್ ಗಳಿಗೆ ವರ್ಷಗಳಿಂದ ಉಪಯೋಗಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ವರ್ಷಗಳ ಹಿಂದೆ ಪರಿಸರದ ನಾಗರಿಕರ ನೀರಿನ ದಾಹ ತೀರಿಸುತ್ತಿದ್ದ ಬಾವಿಯನ್ನು ಈಗ ಕಸ ಎಸೆಯಲು ಬಳಸುತ್ತಿರುವುದರಿಂದ ಬಾವಿಯ ನೀರು

ಪುತ್ತಿಗೆ : ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮ

ಮೂಡುಬಿದಿರೆ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿಗೆ ಸರ್ವಧರ್ಮೀಯರು ಸಂದರ್ಶಿಸುವ `ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮ ನಡೆಯಿತು. ಅನಾರೋಗ್ಯಪೀಡಿತರಿಗೆ ಸಹಾಯಧನ ವಿತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಮಾತನಾಡಿ ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಆಧಾರದಲ್ಲಿ ಗುರುತಿಸುವ ಬದಲು ಆತನ ಪ್ರಾಮಾಣಿಕತೆಯ ಅಧಾರದಲ್ಲಿ ಗುರುತಿಸಬೇಕು. ದೇವರ ಕಾರ್ಯಗಳಿಗೆ ಪ್ರಾಮಾಣಿಕತೆ

ಮುಂಡ್ಕೂರು : ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದ ಸ್ಥಳೀಯರು

ಮುಂಡ್ಕೂರು ಗ್ರಾಮ ಪಂಚಾಯತ್ 2022- 23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿದ್ದರು. ಸಂಕಲಕರಿಯದ ಉಗ್ಗೆದಬೆಟ್ಟು ಹಾಗೂ ಕೃಷ್ಣ ಬೆಟ್ಟು ನಿವಾಸಿಗಳ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರಿ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿ,

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಕಾರ್ಕಳದಲ್ಲಿ ಬೃಹತ್ ಬೈಕ್ ರ್‍ಯಾಲಿ

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಕಾರ್ಕಳದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡರು. ಕಾರ್ಕಳದ ಅನಂತಶಯನ ವೃತ್ತದಿಂದ ಅಜೇಕಾರ್ ವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಮಾಕೇಶವ್ ರ್‍ಯಾಲಿಗೆ ಚಾಲನೆ ನೀಡಿದರು. ಸಚಿವರಾದ ವಿ. ಸುನಿಲ್ ಕುಮಾರ್ ಸೇರಿದಂತೆ ಸುಮಾರು 2000 ಬೈಕುಗಳು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.

ಉಳ್ಳಾಲ ನಗರಸಭೆ ಭ್ರಷ್ಟಾಚಾರ ಲೋಕಾಯುಕ್ತ ತನಿಖೆಗೆ ಎಸ್‍ಡಿಪಿಐ ಆಗ್ರಹ

ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕುಂಠಿತಗೊಂಡಿದ್ದು, ಉಳ್ಳಾಲ ನಗರಸಭೆಯ ಪೌರಾಯುಕ್ತೆ ತಕ್ಷಣ ಉಳ್ಳಾಲದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಮತ್ತು ಕಳೆದ ಎರಡು ವರ್ಷದ ಅವಧಿಯಲ್ಲಿ ನಡೆದ ಭೃಷ್ಟಾಚಾರದ ವಿಚಾರದಲ್ಲಿ ಕೂಲಂಕುಷ ಪರಿಶೀಲನೆ ನಡೆಸಿ ಲೋಕಾಯುಕ್ತ ತನಿಖೆಗೆ ವಹಿಸಿಕೊಡಬೇಕು ಎಂದು ನಗರಸಭೆಯ ಎಸ್‍ಡಿಪಿಐ ಸದಸ್ಯ ರಮೀಝ್ ನಗರಸಭಾ ಪೌರಾಯುಕ್ತೆಯನ್ನು ಆಗ್ರಹಿಸಿದ್ದು,

ಪ್ರಗತಿಪರ ಕೃಷಿಕ ಆಂಡ್ರೊ ಮಿಸ್ಕಿಟ್ ನಿಧನ

ಕಿನ್ನಿಗೋಳಿ: ಪೊಂಪೈ ಪದವಿಪೂರ್ವ ಕಾಲೇಜು ಐಕಳ ಇದರ ವಾಣಿಜ್ಯ ವಿಭಾಗದ ನಿವೃತ ಲ್ಯಾಬ್ ಅಸಿಸ್ಟೆಂಟ್ ಹಾಗೂ ಕಟೀಲು ಸಂತ ಜಾಕೋಬ್ ದೇವಾಲಯದ ಮಾಜಿ ಉಪಾಧ್ಯಕ್ಷರು ಮತ್ತು ಪ್ರಗತಿಪರ ಕೃಷಿಕರು ಆಗಿರುವಂತ ಆಂಡ್ರೊ ಮಿಸ್ಕಿಟ್ ಇಂದು ಬೆಳಿಗ್ಗೆ ನಿಧನರಾದರು. ಅವರು ತೋಟದ ಕೆಲಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಫೆಬ್ರವರಿ ಒಂದರಂದು ಹೆಜ್ಜೇನು ನೊಣಗಳ ದಾಳಿಗೆ ಸಿಲುಕಿ ತುರ್ತಾಗಿ ಆಸ್ಪತ್ರೆಗೆ ತೀವ್ರ ನಿಗಾ ಘಟಕಕ್ಕೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ

ಕಿನ್ನಿಗೋಳಿ : ಬಲಿಪ ನಾರಾಯಣ ಮತ್ತು ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕಿನ್ನಿಗೋಳಿ: ಯಕ್ಷಲಹರಿ(ರಿ) ಕಿನ್ನಿಗೋಳಿ, ದ.ಕ. ಮತು ವಿಜಯ ಕಲಾವಿದರು ಕಿನ್ನಿಗೋಳಿ ಹಾಗು ಯುಗಪುರುಷ ಕಿನ್ನಿಗೋಳಿ ಇದರ ವತಿಯಿಂದ ಗುರುವಾರ ಸಂಜೆ.5-30ಕ್ಕೆ ಗಂಟೆಗೆ ಯುಗಪುರುಷದ ಸಭಾಭವನದಲ್ಲಿ ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರ ಮತ್ತು ಕವಿ,ಪ್ರಸಂಗಕರ್ತ,ಅರ್ಥಧಾರಿ ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮನ್ನು ನಡೆಯಲಾಯಿತು. ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ