Home Posts tagged #udyavara

ಉಡುಪಿ: ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯಿಂದ ವೈಭವದ ಶೋಭಾಯಾತ್ರೆ

ಉಡುಪಿಯ ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯ ಶಾರಾದ ವಿಸರ್ಜನಾ ವೈಭವದ ಮೆರವಣಿಗೆಯು ನಡೆಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ಚಂಡೆ ವಾದ್ಯ ಮೇಳಗಳು ಭಾಗವಹಿಸಿದ್ದವು. ಉದ್ಯಾವರ, ಮೇಲ್ಪೇಟೆ ಮಾರ್ಗವಾಗಿ ಪಿತ್ರೋಡಿ ವರೆಗೆ ವೈಭವ ಮೆರವಣಿಗೆಯಲ್ಲಿ ಸಾಗಿ ಬಂದ ಶಾರದೆಯನ್ನು ಕಂಡು ಜನ ಭಕ್ತಿ ಪರವಶರಾದರು.ಇನ್ನೂ ವಿಶೇಷವಾಗಿ ಮೆರವಣಿಗೆಯಲ್ಲಿ ಚಂಡೆ

ಉದ್ಯಾವರ : ರೈಲ್ವೇ ಕ್ರಾಸಿಂಗ್ ಗೇಟ್‍ನಿಂದ ಪ್ರಯಾಣಿಕರಿಗೆ ತೊಂದರೆ

ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಸಮೀಪವಿರುವ ಉದ್ಯಾವರ ರೈಲ್ವೇ ಕ್ರಾಸಿಂಗ್ ಗೇಟ್ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ನಿರಂತರ ಅಡಚಣೆಯಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಹಾಗೂ ಜನ ಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಕೂಡ ನೀಡದೆ ರೈಲ್ವೇ ಗೇಟ್‍ನ್ನು ಇಲ್ಲಿ ಬಂದ್ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಜೇಶ್ವರ ರಥಬೀದಿ ಅಥವಾ ಹೊಸಂಗಡಿ ಭಾಗದಿಂದ

ಉದ್ಯಾವರದ ಪಿತ್ರೋಡಿಯಲ್ಲಿ ವ್ಯಕ್ತಿಯ ಕೊಲೆ

ಉದ್ಯಾವರ ಸಮೀಪದ ಪಿತ್ರೋಡಿಯಲ್ಲಿ ನಿನ್ನೆ ರಾತ್ರಿ ಮದ್ಯದ ನಶೆಯಲ್ಲಿ ವ್ಯಕ್ತಿಗಳಿಬ್ಬರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಮೃತರನ್ನು ಪಿತ್ರೋಡಿ ನಿವಾಸಿ ದಯಾನಂದ (40) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಭರತ್ ನನ್ನು ಕಾಪು ಪೊಲೀಸ್ರು ಬಂಧಿಸಿದ್ದಾರೆ ನಿನ್ನೆ ರಾತ್ರಿ ಉದ್ಯಾವರ ಪಿತ್ರೋಡಿ ಹಳೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಬಾರ್ ಒಂದರಲ್ಲಿ ಕ್ಷುಲ್ಲಕ ವಿಚಾರಕ್ಕೆ ದಯಾನಂದ ಹಾಗೂ ಭರತ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಬಾರ್ ನಿಂದ

ಉದ್ಯಾವರದಲ್ಲಿ ಅಂಡರ್ ಪಾಸ್ ಬೇಡಿಕೆಗಾಗಿ ಪ್ರತಿಭಟನೆ : 11ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಮಂಜೇಶ್ವರ: ಉದ್ಯಾವರದಲ್ಲಿ ಅಂಡರ್ ಪಾಸ್ ಬೇಡಿಕೆಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 11 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಸಮಿತಿಯ ನೇತಾರ ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ 11 ನೇ ದಿನದ ಧರಣಿ ಸತ್ಯಾಗ್ರಹವನ್ನು ಉದ್ಯಾವರ ಶ್ರೀ ಅರಸು ಮಂಜಿಷ್ಟಾರ್ ಕ್ಷೇತ್ರದ ಪಾತ್ರಿ ರಾಜ ಬೆಲ್ಚಾಡ ರವರು ಉದ್ಘಾಟಿಸಿದರು. ಈ ಸಂದರ್ಭ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಕುಟುಂಬ ಶ್ರೀ ಸದಸ್ಯರು ಧರಣಿಯಲ್ಲಿ

ಉದ್ಯಾವರ: ರಸ್ತೆ ವಿಭಾಜಕಕ್ಕೆ ಢಿಕ್ಕಿಯಾಗಿ ಪಲ್ಟಿಯಾದ ಗೂಡ್ಸ್ ಟೆಂಪೋ

ರಸ್ತೆ ವಿಭಾಜಕಕ್ಕೆ ಗೂಡ್ಸ್ ಟೆಂಪೋವೊಂದು ಢಿಕ್ಕಿಯಾಗಿ ಪಲ್ಟಿಯಾದ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ಅಪಘಾತದಲ್ಲಿ ಟೆಂಪೋ ಚಾಲಕನ ಕೈ ಮೂಳೆ ಮುರಿತಕ್ಕೊಳಗಾಗಿದೆ. ಮಂಗಳೂರು ಕಡೆಯಿಂದ ಬಂದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿಯಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಿದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಕಾಪು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ತೆರವುಗೊಳಿಸಿದರು.