ಉಡುಪಿ: ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯಿಂದ ವೈಭವದ ಶೋಭಾಯಾತ್ರೆ
ಉಡುಪಿಯ ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯ ಶಾರಾದ ವಿಸರ್ಜನಾ ವೈಭವದ ಮೆರವಣಿಗೆಯು ನಡೆಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ಚಂಡೆ ವಾದ್ಯ ಮೇಳಗಳು ಭಾಗವಹಿಸಿದ್ದವು.
ಉದ್ಯಾವರ, ಮೇಲ್ಪೇಟೆ ಮಾರ್ಗವಾಗಿ ಪಿತ್ರೋಡಿ ವರೆಗೆ ವೈಭವ ಮೆರವಣಿಗೆಯಲ್ಲಿ ಸಾಗಿ ಬಂದ ಶಾರದೆಯನ್ನು ಕಂಡು ಜನ ಭಕ್ತಿ ಪರವಶರಾದರು.ಇನ್ನೂ ವಿಶೇಷವಾಗಿ ಮೆರವಣಿಗೆಯಲ್ಲಿ ಚಂಡೆ ಹಾಗೂ ವಾಯಿಲಿನ್ ಫ್ಯೂಶನ್ ಸಂಗೀತದ ನಾದಕ್ಕೆ ಜನ ಮೈಮರೆತರು.