ಎಸೆಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ
ಬಹುನಿರೀಕ್ಷಿತ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಉಡುಪಿ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ ಸಿಕ್ಕಿದೆ. ಸಾಂಕ್ರಾಮಿಕ ಕೊರೋನಾದ ಹಿನ್ನೆಲೆಯಲ್ಲಿ ಈ ಬಾರಿ ಹಲವಾರು ಸವಾಲುಗಳ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಎರಡು ದಿನ ಒಟ್ಟು 6 ಪರೀಕ್ಷೆಗಳು ನಡೆದಿತ್ತು. ನಾಲ್ವರು ವಿದ್ಯಾರ್ಥಿಗಳು ಪೋಷಕರ ಬೆಂಬಲ ಮತ್ತು ಶಿಕ್ಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯ ಆಗಿದೆ ಎಂದು ನಾಲ್ಕು ವಿದ್ಯಾರ್ಥಿಗಳು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ನಡುವೆ ಪರೀಕ್ಷೆಗಳು ನಡೆಯುತ್ತದೆ ನಡೆಯುವುದಿಲ್ಲ ಎಂಬ ಹಲವು ಗೊಂದಲಗಳ ನಡುವೆ ಶಿಕ್ಷಕರು ಮತ್ತು ಪೋಷಕರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಾವು ವರ್ಷಪೂರ್ತಿ ಸಬ್ಜೆಕ್ಟಿವ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಕೊನೆಯ ಹಂvದಲ್ಲಿ ಪರೀಕ್ಷೆ ಪ್ಯಾಟರ್ನ್ ಬದಲಾಯ್ತು. ಆಬ್ಜೆಕ್ಟಿವ್ ಗೆ ಹೊಂದಿಕೊಂಡು ಪರೀಕ್ಷೆ ಬರೆಯಬೇಕಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಉಡುಪಿ ನಗರದ ಒಳಕಾಡು ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಮತ್ತು ಕುಂದಾಪುರ ತಾಲೂಕಿನ ಎಸ್ ವಿ ಕೆ ಆಚಾರ್ಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ 625 ಅಂಕ ಲಭಿಸಿದೆ.ವಿದ್ಯಾರ್ಥಿಗಳಾದ ಅಭಿಷೇಕ್ ಹೊಳ್ಳ, ಟಿಎಪೈ ಅಂಗ್ಲ ಮಾಧ್ಯಮ ಶಾಲೆಯ ನವನೀತ್ ರಾವ್, ಪ್ರಣಿತ ರಾವ್ ಮತ್ತು ಅನುಶ್ರೀ ಶೆಟ್ಟಿ ಅವರು 625ರಲ್ಲಿ 625 ಅಂಕಗಳನ್ನು ಪಡೆದು ಉಡುಪಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.