ಗಂಭೀರ ಸ್ಥಿತಿಯಲ್ಲಿರುವ ಎತ್ತಿನ ಆರೈಕೆಯಲ್ಲಿ ಯುವಕರು
ಪಡುಬಿದ್ರಿ ಪೊಲೀಸರ ಕಾರ್ಯಚರಣೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳ ಪೈಕಿ ಗಂಭೀರ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಎತ್ತು ಒಂದನ್ಬು ಸ್ಥಳೀಯ ಹಿಂದೂ ಸಂಘಟನೆಯ ಯುವಕರು ಆರೈಕೆ ನಡೆಸಿ ಬದುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದರೆಡು ದಿನಗಳಿಂದಲೂ ಕಾಲಿಗೆ ಗಂಭೀರ ಗಾಯಗೊಂಡು ಮಲಗಿದ್ದಲೇ ಇದ್ದ ಎತ್ತನ್ನು ಯುವಕರು ಬಹಳಷ್ಟು ಶ್ರಮ ವಹಿಸಿ ಸ್ಥಳೀಯ ಪಶು ವೈದ್ಯಾಧಿಕಾರಿಗಳ ಸಹಾಯದೊಂದಿಗೆ ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ದಿನ ಕಾಪುವಿನಿಂದ ತಂದ ಯಂತ್ರವೊಂದರ ಮೂಲಕ ಅದನ್ನು ನಿಲ್ಲಿಸಿ ಆ ಮೂಲಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ನೇರವಾಗಿ ಆಹಾರ ಸೇವನೆಯನ್ನು ನಡೆಸದ ಎತ್ತಿಗೆ ಯುವಕರೇ ಹಿಂಡಿ, ಬಾಳೆ ಹಣ್ಣು, ಹಸುರು ಹುಲ್ಲು ತಂದು ತಿನ್ನಿಸುವ ಮೂಲಕ ಗೋವು ಪ್ರೇಮವನ್ನು ಮೆರೆದಿದ್ದಾರೆ