ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ
2019-20ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ಪ್ರಶಸ್ತಿಗೆ 15 ಮಂದಿ ಆಯ್ಕೆಯಾಗಿದ್ದಾರೆ. ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಚಿ.ಸು.ಕೃಷ್ಣಶೆಟ್ಟಿ ಸೇರಿದಂತೆ 15 ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಆ.18ರಂದು ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಸಾಧಕರು:
1. ಬಸವ ರಾಷ್ಟ್ರೀಯ ಪ್ರಶಸ್ತಿ- ಬಸವಲಿಂಗಪಟ್ಟದೇವರು
2. ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ- ಡಾ. ಪಂ. ನರಸಿಂಹಲು ವಡವಾಟಿ
3. ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ- ಡಾ.ವೀರೇಂದ್ರ ಹೆಗ್ಗಡೆ
4. ನಾಟ್ಯರಾಣಿ ಶಾಂತಲಾ ಪ್ರಶಸ್ತಿ- ಬಿ.ಕೆ.ವಸಂತಲಕ್ಷ್ಮಿ
5. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ- ಚಿ.ಸು.ಕೃಷ್ಣಶೆಟ್ಟಿ
6. ಜಕಣಾಚಾರಿ ಪ್ರಶಸ್ತಿ- ಬಿ.ಎಸ್.ಯೋಗಿರಾಜ
7. ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ- ಮದಿರೆ ಮರಿಸ್ವಾಮಿ
8. ಜಾನಪದಶ್ರೀ ಪ್ರಶಸ್ತಿ- ಬಿ.ಟಾಕಪ್ಪ ಕಣ್ಣೂರು
9. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ- ರಾ.ನಂ.ಚಂದ್ರಶೇಖರ
10. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ- ಚೂಡಾಮಣಿ ನಂದಗೋಪಾಲ್
11. ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ- ಸಿದ್ದಣ್ಣ ಉತ್ನಾಳ
12. ಅಕ್ಕಮಹಾದೇವಿ ಪ್ರಶಸ್ತಿ- ಜಯಶ್ರೀ ದಂಡೆ
13. ನಿಜಗುಣ ಪುರಂದರ ಪ್ರಶಸ್ತಿ- ಗೌರಿ ಕುಪ್ಪುಸ್ವಾಮಿ
14. ಸಂತ ಶಿಶುನಾಳ ಶರೀಫ ಪ್ರಶಸ್ತಿ- ಪಂ.ವಾದಿರಾಜ ನಿಂಬರಗಿ
15. ಕುಮಾರವ್ಯಾಸ ಪ್ರಶಸ್ತಿ- ಗಂಗಮ್ಮ ಕೇಶವಮೂರ್ತಿ