ನಾಟಕ ಕಲಾವಿದ ರವಿ ರಾಮಕುಂಜ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ನಾಟಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರವಿ ರಾಮಕುಂಜ ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ 66ನೇ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ 15 ವರ್ಷಗಳಿಂದ ತುಳು ನಾಟಕ ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕøತರಾಗಿದ್ದಾರೆ. ರವಿ ರಾಮಕುಂಜ ಅವರು ವಿ4 ನ್ಯೂಸ್ ಆಯೋಜಿಸಿದ ರಿಯಾಲಿಟಿ ಶೋ ಆದ ಕಾಮಿಡಿ ಪ್ರೀಮಿಯರ್ ಲೀಗ್ನ ಜನಪ್ರಿಯ ಕಲಾವಿದರಾಗಿಯೂ ಹೊರಹೊಮ್ಮಿದ್ದಾರೆ.