ಬೀಚ್ ಫ್ರೆಂಡ್ಸ್ ಹೆಜಮಾಡಿ ವತಿಯಿಂದ ಮಕ್ಕಳ ದಿನಾಚರಣೆ
ಬೀಚ್ ಫ್ರೆಂಡ್ಸ್ (ರಿ) ಹೆಜಮಾಡಿ ಇದರ ವತಿಯಿಂದ ಮಕ್ಕಳ ದಿನಾಚರೆಣೆಯ ಅಂಗವಾಗಿ ಚಿಣ್ಣರ ಕಲರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪುಟಾಣಿ ಮಕ್ಕಳು ಅತಿಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿವೃತ್ತ ಮುಖ್ಯೋಪಧ್ಯಾಯರಾದ ಸಂಜೀವ ಟಿ ಹಾಗೂ ನಿವೃತ್ತ ಅಧ್ಯಾಪಕಿ ಮಾಲತಿ ಟೀಚರ್ ಹಾಗೂ ಪಾಂಡುರಂಗ ಕರ್ಕೇರಾ, ಲೀಲೇಶ್ ಸುವರ್ಣ, ದಿನೇಶ್ ಕೋಟಿಯನ್ ಆಚೆಮಟ್ಟು ಮುಂಬೈ ,ಲೋಕನಾಥ ಗುರಿಕಾರ, ಜಗದೀಶ್ ಕೋಟ್ಯಾನ್ ಇವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗಾಗಿ ನೃತ್ಯ ಹಾಗೂ ಮೂಕಾಬಿನಯ, ರಸಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ಮಕ್ಕಳಿಗೂ ಕೂಡ ಉಡುಗೊರೆ ನೀಡಲಾಯಿತು. ರೋನೀತ್ ಜೇ ಸಾಲಿಯಾನ್ ಅತಿಥಿಗಳನ್ನು ಸ್ವಾಗತಿಸಿ
ಅನನ್ಯ ಕೋಟಿಯನ್ ಮಕ್ಕಳ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಲಿಖಿತ್ ಕೋಟಿಯನ್ ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು. ನಿತಿನ್ ಮೆಂಡನ್ ಮತ್ತು ನಾಗರಾಜ್ ಸುವರ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು.