ಬೆಂಗರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಮತ್ತು ಬೆಂಗರೆ ವಿದ್ಯಾರ್ಥಿ ಸಂಘ ಅಮೃತೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಬೆಂಗ್ರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ವನಮೋತ್ಸವ ಕಾರ್ಯಕ್ರಮ ನಡೆಯಿತು.
ಬೆಂಗ್ರೆ ವಿದ್ಯಾರ್ಥಿ ಸಂಘ ಇದರ ಅಧ್ಯಕ್ಷರಾದ ಸಂಜಯ್ ಸುವರ್ಣ ಬೆಂಗ್ರೆ ಇವರ ಮುಂದಾಳತ್ವದಲ್ಲಿ ಜರಗಿತು. ವನಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ಹಿರಿಯ ಸದಸ್ಯರಾದ ಸುರೇಂದ್ರ ಸಾಲಿಯನ್ ಮಿತ್ತ ಮನೆ ಇವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಂಗ್ರೆ ವಿದ್ಯಾರ್ಥಿ ಸಂಘ ಅಮೃತೋತ್ಸವ ಸಮಿತಿಯ ಅಧ್ಯಕ್ಷರಾದ ಚೇತನ್ ಬೆಂಗ್ರೆ ಉಪಾಧ್ಯಕ್ಷರಾದ ಪುಂಡಲಿಕ ಮೈಂದನ್ ಸಂಚಾಲಕರಾದ ಭಾಸ್ಕರ್ ಪುತ್ರನ್ ಕಾರ್ಯದರ್ಶಿಯಾದ ಪುಷ್ಪರಾಜ್ ಬೆಂಗರೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಹರೀಶ್ ಸುವರ್ಣ ಜ್ಯೋತಿ ಹರೀಶ್ ರಾಕೇಶ್ ಸುವರ್ಣ ಅಮೃತೋತ್ಸವ ಸಮಿತಿಯ ಸದಸ್ಯರುಗಳಾದ ಸಚಿನ್ ಸುವರ್ಣ ಲೋಕೇಶ್ ಸುವರ್ಣ ಬಾಬು ಪ್ರಭಾಕರ್ ಹರೀಶ್ ಕಾಂಚನ್ ರಾಜೇಶ್ ಬೆಂಗ್ರೆ ಪ್ರಶಾಂತ್ (ಸೋನು ) ಬೆಂಗ್ರೆ ವಿದ್ಯಾರ್ಥಿ ಸಂಘ ಯುಎಇ ದುಬೈ ಇದರ ಸದಸ್ಯರಾದ ಕಿಶೋರ್ ಬೆಂಗರೆ ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾಕಾರ್ಮಿಕರು ಜೊತೆಗಿದ್ದರು.