ಬೇಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ
ಬೇಲೂರು ತಾಲೂಕಿನ ಮಲೆನಾಡು ಪ್ರದೇಶವಾದ ಅರೆಹಳ್ಳಿ ಮತ್ತು ಬಿಕ್ಕೋಡು ಹೋಬಳಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸುಂಡೆಕೆರೆ ಹಾಗೂ ನಾರ್ವೆ ಪೇಟೆ ಸಂಪರ್ಕಿಸುವ ಸೇತುವೆ ಮುಳುಗಡೆ ಯಾಗಿದೆ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ರಸ್ತೆಬದಿಯ ಮರಗಳು ನೆಲಕಚ್ಚಿದ್ದು ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಕೆರೆ-ಕಟ್ಟೆ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ನಾಟಿ ಮಾಡಲು ಸಿದ್ದಪಡಿಸಿದ್ದ ಸಸಿ ಮಡಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಭೀಕರ ಗಾಳಿ-ಮಳೆಗೆ ಸುಲಗಳಲೆ ಗ್ರಾಮದ ಕುಮಾರ್ ಎಂಬವರ ವಾಸದ ಮನೆ ಅರ್ಧಭಾಗ ಬಿದ್ದು ಹೋಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗಾಳಿಯ ಹೊಡೆತಕ್ಕೆ ನಾರ್ವೆ ಪೇಟೆ ಗ್ರಾಮದ ರಾಮಕೃಷ್ಣ ಎಂಬುವರು ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೇಲ್ಚಾವಣಿ ಪುಡಿಯಾಗಿದೆ ಇಂಟಿ ತೊಳಲು ಮಂಜೇಗೌಡ ಎಂಬುವವರ ಜಾನುವಾರು ಕೊಟ್ಟಿಗೆಯ ಗೋಡೆ ಕುಸಿದುಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಇನ್ನು ಎಷ್ಟು ಜನರ ಬದುಕನ್ನು ಕಿತ್ತುಕೊಳ್ಳುವುದು ಕಾದು ನೋಡಬೇಕಾಗಿದೆ.