ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ: ಅಳಿಕೆಯ ಕಲ್ಲೆಂಚಿನಪಾದೆಯಲ್ಲಿ ನಡೆದ ಘಟನೆ
ವಿಟ್ಲ: ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಹಾನಿಗೊಂಡ ಘಟನೆ ಅಳಿಕೆ ಗ್ರಾಮ ಕಲ್ಲೆಂಚಿನಪಾದೆ ಎಂಬಲ್ಲಿ ಸಂಭವಿಸಿದೆ.
ಅಳಿಕೆ ಗ್ರಾಮ ಕಲ್ಲೆಂಚಿನಪಾದೆ ಶೀನ ನಳಿಕೆ ಅವರಿಗೆ ಸೇರಿದ ಮನೆಗೆ ರಾತ್ರಿ ಭಾರೀ ಪ್ರಮಾಣ ಸಿಡಿಲು ಬಡಿದಿದೆ. ಇದರಿಂದ ಶೀನ ನಳಿಕೆ, ಅವರ ಪತ್ನಿ ಸುಶೀಲ, ಮಕ್ಕಳಾದ ವಿದ್ಯಾ ಮತ್ತು ವಿನಯ ಅವರು ಗಾಯಗೊಂಡಿದ್ದಾರೆ. ಘಟನೆಯ ತೀವ್ರತೆಗೆ ಮನೆಯ ಗೋಡೆಯನ್ನು ಸೀಳಿಕೊಂಡು ಸಿಡಿಲು ಪ್ರವೇಶಿಸಿದ್ದರಿಂದ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ವಿದ್ಯುತ್ ವೈಯರಿಂಗ್, ವಿವಿಧ ಉಪಕರಣಗಳು ಸುಟ್ಟುಹೋಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷ ಚಂದ್ರಶೇಖರ ಯು ಭೇಟಿ ನೀಡಿದ್ದಾರೆ.