ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ:ಕೂಡಗಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿತ

ವಿಜಯಪುರ ನಗರದಲ್ಲಿ ಶನಿವಾರ ರಾತ್ರಿ 11-47 ಮತ್ತು 11-48ಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೊನಿ, ಗಣೇಶ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲೆಯ ಕೂಡಗಿ, ಮುಳವಾಡ, ಬಬಲೇಶ್ವರ ಇನ್ನು ಹಲವೆಡೆ ಎರಡು ಬಾರಿ ದೊಡ್ಡದಾಗಿ ಶಬ್ಧವಾಗಿದೆ. ಜೊತೆಗೆ ಭೂಮಿಯೂ ಕಂಪಿಸಿದೆ.

ಇನ್ನೂ ಕೂಡಗಿ ಗ್ರಾಮದ ಅಬ್ದುಲ್ ಖಾದ್ರೀ ಜಾಗೀರದ್ದಾರ ಎಂಬುವವರು ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಆಗಿಲ್ಲ. ಹೀಗಾಗಿ ಭಯ ಭೀತರಾದ ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದು ಕಟ್ಟೆ ಮೇಲೆ ಕುಳಿತು ಆತಂಕದಿಂದ ರಾತ್ರಿ ಕಳೆದಿದ್ದಾರೆ.

ಜಿಲ್ಲೆಯ ತಿಕೋಟಾ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಮನಗೂಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಈ ಕುರಿತು ಈಗಾಗಲೇ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಭೂಮಿ ಒಳಗೆ ಕಲ್ಲಿನ ಪದರಗಳು ಸರಿದಾಗ ಈ ರೀತಿ ಭೂಕಂಪನ ಮತ್ತು ಶಬ್ಧದ ಅನುಭವವಾಗುತ್ತದೆ. ಇದು ಭೂಕಂಪನವಲ್ಲ ಎಂದು ಈಗಾಗಲೇ ವರದಿ ನೀಡಿದ್ದಾರೆ.

 

Related Posts

Leave a Reply

Your email address will not be published.