HomeFresh Newsಕೆ ಎಮ್ ಎಫ್ ವತಿಯಿಂದ ನಂದಿನಿ ಸಿಹಿ ಉತ್ಸವ: ಬಿ.ಸಿ. ರೋಡಿನ ಔಟ್‌ ಲೆಟ್‌ ನಲ್ಲಿ...

ಕೆ ಎಮ್ ಎಫ್ ವತಿಯಿಂದ ನಂದಿನಿ ಸಿಹಿ ಉತ್ಸವ: ಬಿ.ಸಿ. ರೋಡಿನ ಔಟ್‌ ಲೆಟ್‌ ನಲ್ಲಿ ಚಾಲನೆ

ಬಂಟ್ವಾಳ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಂದಿನಿ ಸಿಹಿ ಉತ್ಸವವನ್ನು ಆ. 19 ರಿಂದ ಹಮ್ಮಿಕೊಂಡಿದ್ದು ಬಿ.ಸಿ.ರೋಡಿನ ವಿತರಕರಾದ ಅಲೋಷಿಯಸ್ ಡಿಸೋಜಾ ಅವರ ಮಳಿಗೆಯಲ್ಲಿ ಚಾಲನೆ ನೀಡಲಾಯಿತು.

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸವಿತ ಎನ್. ಶೆಟ್ಟಿ ದೀಪ ಪ್ರಜ್ವಲಿಸಿದರು. ಅವರು ವಿ4 ನ್ಯೂಸ್‌ನೊಂದಿಗೆ ಮಾತನಾಡಿ ನಂದಿನಿ ಸಿಹಿ ಉತ್ಸವದ  ಪ್ರಯುಕ್ತ ಎಲ್ಲಾ ನಂದಿನಿ ಸಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಮಾರುಕಟ್ಟೆ ಅಧಿಕಾರಿ ರವಿ.ಎಂ., ಜಯ, ಪ್ರದೀಪ್ ಶೆಟ್ಟಿ ಹಾಗೂ ಫ್ರಾಂಚೈಸಿದಾರರಾದ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments