HomeFresh Newsಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿದೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿದೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

 ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರವಿದೆ. ಎಷ್ಟೇ ಆರೋಪ ಬಂದರೂ ಕೂಡ ತನಿಖೆಗೊಳಗಾಗುವ ನೈತಿಕ ಧೈರ್ಯವು ಈ ಸರಕಾರಕ್ಕಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ರು.

ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರ 20 ಸಾವಿರ ಕೋ.ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ವತಃ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಆದಾಗ್ಯೂ ಬಿಜೆಪಿ ಹೈಕಮಾಂಡ್ ಸುಮ್ಮನಿವೆ ಎಂದು ಆರೋಪಿಸಿದ್ರು. ದ.ಕ.ಜಿಲ್ಲೆಗೆ ಬೇಡಿಕೆಗೆ ತಕ್ಕಷ್ಟು ಕೋವಿಡ್-19  ಲಸಿಕೆಯನ್ನು ಪೂರೈಸಲು ರಾಜ್ಯ ಸರಕಾರಕ್ಕೆ ಆ.15ರವರೆಗೆ ಗಡುವು ನೀಡುವೆವು. ಅದರೊಳಗೆ ಪೂರೈಸದಿದ್ದರೆ ರಾಜ್ಯ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಎಂ.ಎಸ್.ಮುಹಮ್ಮದ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಸದಾಶಿವ ಶೆಟ್ಟಿ, ಮಮತಾ ಗಟ್ಟಿ, ಲಾರೆನ್ಸ್ ಡಿಸೋಜ, ಜೆ. ಅಬ್ದುಲ್ ಸಲೀಂ, ರಾಜಶೇಖರ ಕೋಟ್ಯಾನ್, ಶುಭೋದಯ ಆಳ್ವ, ಜೋಕಿಂ ಡಿಸೋಜ, ನಝೀರ್ ಬಜಾಲ್, ಗಣೇಶ್ ಪೂಜಾರಿ, ಶೋಭಾ ಕೇಶವ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments