HomeFresh Newsತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ "ಲೋಗೋ" ಬಿಡುಗಡೆ

ತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ “ಲೋಗೋ” ಬಿಡುಗಡೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ “ಲೋಗೋ”ವನ್ನು ಬಿಡುಗಡೆ ಮಾಡಿದರು.
ತುಳುಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು ಹಾಗೂ “ತುಳು ಕೆಳಿಂಜ ಭಾರತ” ಎನ್ನುವ ತುಳುನಾಡಿಗೆ ಸಂಬಂಧಪಟ್ಟ ಪುಸ್ತಕವನ್ನು ಕೊಟ್ಟು ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್ ಹಾಗೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್, ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು ಪೂಜಾರಿ, ಕೋಶಾಧಿಕಾರಿ ಚರಿತ್ ಪೂಜಾರಿ, ಕಾರ್ಯದರ್ಶಿ ಪ್ರತೀಕ್ ರಾವ್, ಸಂಘಟನಾ ಸಂಚಾಲಕ ರೋಶನ್ ರೇನೊಲ್ಡ್, ಸಹ ಸಂಚಾಲಕ ಕುಷಿತ್, ವರುಣ್ ಆಚಾರ್ಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments