HomeFresh Newsಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ 1 ಲಕ್ಷ ಕೋವಿಡ್-19 ಉಚಿತ ಲಸಿಕೆ ಕೊಡುಗೆ

ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ 1 ಲಕ್ಷ ಕೋವಿಡ್-19 ಉಚಿತ ಲಸಿಕೆ ಕೊಡುಗೆ

ಬೆಂಗಳೂರು: ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್ಲೆಟ್ಗಳ ಜಾಲವನ್ನು ಹೊಂದಿರುವ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. ಇದರ ಅಂಗವಾಗಿ ಸಂಸ್ಥೆಯು 1,೦೦,೦೦೦ ಉಚಿತ ಕೋವಿಡ್-19 ಲಸಿಕೆಗಳನ್ನು ಕೊಡುಗೆ ನೀಡಲು ನಿರ್ಧರಿಸಿದರು. ಆಭರಣ ತಯಾರಕರು, ಸಿಬ್ಬಂದಿ, ಹೂಡಿಕೆದಾರರು ಮತ್ತು ಅವರ ಕುಟುಂಬ ಸದಸ್ಯರಿಗಲ್ಲದೇ ದುರ್ಬಲ ವರ್ಗದವರಿಗೆ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೆ ಮಂಡ್ಸ್ ತನ್ನ ಸರಣಿ ಸಿಎಸ್ಆರ್ ಉಪಕ್ರಮಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾರ್ವಜನಿಕರಿಗೆ ನೆರವಾಗುತ್ತಿದೆ. ಇದೀಗ ಲಸಿಕೆಯನ್ನು ತ್ವರಿತಗತಿಯಲ್ಲಿ ನಡೆಸುವ ಸರ್ಕಾರದ ಕಾರ್ಯದಲ್ಲಿ ಕೈಜೋಡಿಸಿದೆ.

ಮಲಬಾರ್ ಗ್ರೂಪ್ ಅಧ್ಯಕ್ಷ .ಪಿ. ಅಹ್ಮದ್ ಅವರು ಕೊಡುಗೆ ಬಗ್ಗೆ ಮಾತನಾಡಿ, ‘ಕೋವಿಡ್-19 ಪ್ರಕರಣಗಳ ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಡೀ ದೇಶ ಹೋರಾಟ ಮಾಡುತ್ತಿದೆ. ಸಾಂಕ್ರಾಮಿಕ ಹರಡುವುದನ್ನು ತಪ್ಪಿಸಲು ಲಸಿಕೆ ಅತ್ಯಂತ ಮುಖ್ಯವಾಗಿದೆ. ರಾಷ್ಟ್ರವ್ಯಾಪಿ ಕೈಗೊಂಡಿರುವ ಲಸಿಕಾ ಅಭಿಯಾನಕ್ಕೆ ಇದು ನಮ್ಮ ಮೊದಲ ಕೊಡುಗೆಯಾಗಿದೆ. ನಾವು ನಮ್ಮ ಸೇವೆಗಳು ಮತ್ತು ಮೂಲಸೌಕರ್ಯಗಳ ಮೂಲಕ ಜನರನ್ನು ತಲುಪಲಿದ್ದೇವೆ ಮತ್ತು ದುರ್ಬಲ ವರ್ಗದ ಜನರಿಗೆ ಲಸಿಕೆ ಹಾಕಿಸುವ ಕೆಲಸ ಮಾಡಲಿದ್ದೇವೆ. ಇವರಲ್ಲದೇ, ದೀರ್ಘಕಾಲೀನ ಅನಾರೋಗ್ಯಕ್ಕೆ ಒಳಗಾಗಿರುವ ವೃದ್ಧರನ್ನು ದತ್ತಿ ಸಂಸ್ಥೆಗಳು ಮತ್ತು ಸಮಾನ ಮನಸ್ಕ ಸಂಘಸಂಸ್ಥೆಗಳ ಮೂಲಕ ಪತ್ತೆ ಮಾಡಿ ಅವರಿಗೂ ಲಸಿಕೆಯನ್ನು ಕೊಡಿಸಲಾಗುತ್ತದೆ. ಲಸಿಕ ಅಭಿಯಾನಕ್ಕೆಂದು ನಾವು 8 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದೇವೆಎಂದು ತಿಳಿಸಿದರು.

ಮಲಬಾರ್ ಗ್ರೂಪ್ ತನ್ನ ತಂಡದ ಸದಸ್ಯರ, ಪಾಲುದಾರ ಜಾಲಗಳ ಸದಸ್ಯರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಏನು ಬೇಕಾದರೂ ಮಾಡಲಿದೆ” ಎಂದು ಹೇಳಿದರು. ಉದಾಹರಣೆಗೆ ಆಭರಣ ತಯಾರಿಕಾ ಉದ್ಯಮದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇತ ರರಿಗೆ ಮಾದರಿಯಾಗಿದೆ. ಉಪಕ್ರಮದ ಅಂಗವಾಗಿ ರಾಷ್ಟ್ರವ್ಯಾಪಿ ಕೆ ಗೊಂಡಿರುವ ಲಸಿಕಾ ಅಭಿಯಾನಕ್ಕೆ ಇದು ಮೊದಲ ಕೊಡುಗೆಯಾಗಿದೆ. ಸಂಸ್ಥೆಯ ಸೇವೆಗಳು ಮತ್ತು ಮೂಲಸೌಕರ್ಯಗಳ ಮೂಲಕ ಜನರನ್ನು ತಲುಪಲಿದ್ದೇವೆ ಮತ್ತು ದುರ್ಬಲ ವರ್ಗದ ಜನರಿಗೆ ಲಸಿಕೆ ಹಾಕಿಸುವ ಕೆಲಸ ಮಾಡಲಿದೆ. ಇವರಲ್ಲದೇ, ದೀರ್ಘಕಾಲೀನ ಅನಾರೋಗ್ಯಕ್ಕೆ ಒಳಗಾಗಿರುವ ವೃದ್ಧರನ್ನು ದತ್ತಿ ಸಂಸ್ಥೆಗಳು ಮತ್ತು ಸಮಾನಮನಸ್ಕ ಸಂಘಸಂಸ್ಥೆಗಳ ಮೂಲಕಪತ್ತೆ ಮಾಡಿ ಅವರಿಗೂ ಲಸಿಕೆಯನ್ನು ಕೊಡಿಸಲಾಗುತ್ತದೆ. ಲಸಿಕಾ ಅಭಿಯಾನವು ಕಂಪನಿಯ ಆವರಣಗಳಲ್ಲಿ ಮತ್ತು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದಿತ ಲಸಿಕೆಗಳನ್ನು ನೀಡಲಿದೆ. ಉಚಿತ ಲಸಿಕೆಗಳನ್ನು ಕೊಡುಗೆಯಾಗಿ ನೀಡುವುದಲ್ಲದೇ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಲಸಿಕಾ ಅಭಿಯಾನಕ್ಕೆ ಬೆಂಬಲ ನೀಡುವ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾಗಿ ಲಸಿಕೆಯನ್ನು ಪಡೆಯುವ ಪ್ರಾಮುಖ್ಯತೆ ಬಗ್ಗೆ ತನ್ನ ಸಿಬ್ಬಂದಿಗೆ ಅರಿವು ಮೂಡಿಸುವುದು, ತಮ್ಮ ಅವಲಂಬಿತರ ಆರೋಗ್ಯ ಕಾಪಾಡಿಕೊಳ್ಳುವುದು, ಇದರ ಮಹತ್ವವನ್ನು ಇತರರಿಗೆ ತಿಳಿಸುವುದು ಮತ್ತು ಲಸಿಕೆ ಪಡೆಯುವವರಿಗೆ ನೆರವಾಗುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದೆ.

ಮಲಬಾರ್ ಗೋಲ್ಡ್ & ಡೈಮಂಡ್ಸ್ ಅತ್ಯಂತ ಯಶಸ್ವಿ ಕಂಪನಿಗಳು ತಮ್ಮ ಪ್ರಮುಖ ವ್ಯವಹಾರಗಳಲ್ಲಿ ಜವಾಬ್ದಾರಿ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಕಂಪನಿಗಳಾಗಿವೆ ಎಂದು ನಂಬುತ್ತದೆ. ಸಿಎಸ್‌ಆರ್ ಚಟುವಟಿಕೆಗಳಿಗೆ ಪ್ರಾರಂಭದಿಂದಲೇ ಗ್ರೂಪ್ ಯಾವಾಗಲೂ ಪೂರ್ವಭಾವಿಯಾಗಿರುತ್ತದೆ. ಅವರು ಕಾರ್ಯನಿರ್ವಹಿಸುವ ಎಲ್ಲಾ ಪ್ರದೇಶಗಳಲ್ಲಿನ ಸಿಎಸ್‌ಆರ್ ಚಟುವಟಿಕೆಗಳಿಗಾಗಿ ಸಂಸ್ಥೆಯು ತನ್ನ ಲಾಭದ ಶೇ.5 ರನ್ನು ಮೀಸಲಿಟ್ಟಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments