HomeFresh Newsರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ ಇಂದಿನ ಅಗತ್ಯತೆ: ಡಾ. ಗೋಪಾಕೃಷ್ಣ ಎಂ. ಗಾಂವ್ಕರ್

ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ ಇಂದಿನ ಅಗತ್ಯತೆ: ಡಾ. ಗೋಪಾಕೃಷ್ಣ ಎಂ. ಗಾಂವ್ಕರ್

ಉಡುಪಿ : ಪ್ರಸ್ತುತ ಜಾಗತಿಕವಾಗಿ ಕಂಡು ಬರುವ ಹಿಂಸಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಪರಿಕಲ್ಪನೆ ಅಗತ್ಯವಾಗಿದೆ. ತಾನು ಚನ್ನಾಗಿ ಬದುಕಿ ಇತರರನ್ನೂ ಬದುಕಲು ಅವಕಾಶ ನೀಡುವ ಮನೋಸ್ಥಿತಿ ಬೆಳೆದಾಗ ಉತ್ತಮ ಬದುಕುವ ವಾತಾವರಣ ನಿರ್ಮಾಣವಾಗಲು ಸಾಧ್ಯ. ಸಂವಿಧಾನದ ಅಶಯವಾದ ಶಾಂತಿ, ಸಹಬಾಳ್ವೆ ಹಾಗೂ ಸಮಾನತೆಯ ಚಿಂತನೆಗಳು ಇಂದಿನ ಯುವ ಸಮುದಾಯದಲ್ಲಿ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಹೇಳಿದರು.

ಅವರು ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯೂತ್‌ರೆಡ್‌ಕ್ರಾಸ್ ಹಾಗೂ ಸ್ಕೌಟ್ & ಗೈಡ್ಸ್ ಆಯೋಜಿಸಿದ್ದ ಸಧ್ಭಾವನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ದೇಶದ ಏಕತೆ ಹಾಗೂ ಸಮಗ್ರತೆಗೆ ನಾಗರಿಕರ ಸೂಕ್ತ ನಡವಳಿಕೆ ಅಗತ್ಯ. ಬ್ರಾತೃತ್ತ್ವದ ಚಿಂತನೆಯು ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸ ಬಲ್ಲದು. ನನಗಿಂತ ದೇಶ ಹಿರಿದು ಎಂಬ ಧ್ಯೇಯದೊಂದಿಗೆ ಉತ್ತಮ ನಾಗರಿಕರಾದಾಗ ಸಧ್ಬಾವನಾ ದಿನಾಚರಣೆಯ ನಿಜವಾದ ಉದ್ಧೇಶ ಸಾಕಾರವಾಗುತ್ತದೆ ಎಂದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು.

ಯೂತ್‌ರೆಡ್ ಕ್ರಾಸ್‌ನ ಸಂಚಾಲಕ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ದಯಾನಂದ ಕುಮಾರ್ ವಂದಿಸಿದರು. ಕು. ಅಶ್ವಿಜಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಥಿಗಳಿಗೆ ಸಧ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments